ಬರುತ್ತಿದೆ ಟಿಕ್‌ಟಾಕ್‌ ಪ್ರತಿಸ್ಪರ್ಧಿ, ‘ಯೂಟ್ಯೂಬ್‌ ಶಾರ್ಟ್ಸ್‌’; ಭಾರತದಲ್ಲೇ ಮೊದಲು ಬಿಡುಗಡೆ!!

ಟಿಕ್‌ಟಾಕ್‌ ಖರೀದಿಯ ವಿಷಯ ಇನ್ನು ಗೊಂದಲದಲ್ಲಿದೆ. ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ತಾನೊಂದು ಪ್ರಯತ್ನ ಮಾಡಿಬಿಡುವ ಉಮೇದಿಯಲ್ಲಿ ಯೂಟ್ಯೂಬ್‌ ಹೊಸ ಸೇವೆ ಪರಿಚಯಿಸುವುದಕ್ಕೆ ಸಿದ್ಧವಾಗಿದೆ

ಚೀನಿ ಆಪ್‌ಗಳನ್ನು ನಿಷೇಧಿಸುವ ಭಾರತ ಸರ್ಕಾರದ ನಿರ್ಧಾರದಿಂದಾಗಿ ಅತ್ಯಂತ ಜನಪ್ರಿಯ ಆಪ್‌ ಟಿಕ್‌ಟಾಕ್‌ ಬಳಕೆ ಸ್ಥಗಿತಗೊಂಡಿತು. ಆದರೆ ಅತಿ ದೊಡ್ಡ ಬಳಕೆದಾರರ ಬಳಗವನ್ನು ಹೊಂದಿದ ಈ ಆಪ್‌ ಅನ್ನು ಈಗ ಖರೀದಿಸುವುದಕ್ಕೆ ಅಮೆರಿಕದ ಕೆಲವು ಕಂಪನಿಗಳು ಮಾತುಕತೆ ನಡೆಸಿವೆ.

ಟಿಕ್‌ಟಾಕ್‌ ಪರಿಕಲ್ಪನೆ ತನ್ನದೇ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡ ರೀತಿ ಹಲವು ಟೆಕ್ ಕಂಪನಿಗಳಲ್ಲಿ ಅಸೂಯೆ ಹುಟ್ಟಿಸಿತು. ನಿಷೇಧಕ್ಕೆ ಒಳಗಾದ ಹಿನ್ನೆಲೆಯಲ್ಲಿ ಅಮೆರಿಕದ ಕಂಪನಿಗಳು ತಮ್ಮದೇ ಆದ ಶಾರ್ಟ್‌ ವಿಡಿಯೋ ಸೇವೆಯನ್ನು ಪರಿಚಯಿಸುತ್ತಿವೆ.

ಫೇಸ್‌ಬುಕ್‌ ಮಾಲಿಕತ್ವದ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಪರಿಚಯಿಸಿದ ಬೆನ್ನಲ್ಲಿ, ಗೂಗಲ್‌ ಯೂಟ್ಯೂಬ್‌ ಶಾರ್ಟ್ಸ್‌ ಹೆಸರಿನ ಸೇವೆಯನ್ನು ನೀಡಲು ಮುಂದಾಗಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಗೂಗಲ್‌, ಭಾರತದ ಬಳಕೆದಾರರಿಗೆ ಮೊದಲ ಬಾರಿಗೆ ಈ ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದೆ.

ಟಿಕ್‌ಟಾಕ್‌ನಂತೆ ಇದರಲ್ಲೂ ಕೇವಲ 15 ಸೆಕೆಂಡ್‌ಗಳ ವಿಡಿಯೋ ಪೋಸ್ಟ್‌ ಮಾಡಬಹುದು. ಈಗಾಗಲೇ ಯೂಟ್ಯೂಬ್‌ ಬಳಸಿರುವವರಿಗೆ ವಿಡಿಯೋ ಪೋಸ್ಟ್‌ ಮಾಡುವುದು ಪರಿಚಿತ. ಆಪ್‌ನಲ್ಲಿರುವ “+” ಐಕಾನ್‌ ಮೇಲೆ ಕ್ಲಿಕ್‌ ಮಾಡಿದರೆ, ವಿಡಿಯೋ ಎಂಬ ಐಕಾನ್‌ ಕಾಣಿಸುತ್ತದೆ. ಅದನ್ನು ಕ್ಲಿಕ್‌ ಮಾಡಿದಾಗ ‘ಕ್ರಿಯೇಟ್‌ ಎ ಶಾರ್ಟ್‌ ವಿಡಿಯೋ’ ಕಾಣಿಸುತ್ತದೆ. ಇದರ ಮೂಲಕ ನೀವು ವಿಡಿಯೋ ಶೂಟ್‌ ಮಾಡಿ ಪೋಸ್ಟ್‌ ಮಾಡಬಹುದು. ವಿಶೇಷ ಫೀಚರ್‌ಗಳೂ ಇವೆ. ನಿಮ್ಮ ವಿಡಿಯೋಕ್ಕೆ ಹಿನ್ನೆಲೆ ಸಂಗೀತ ಸೇರಿಸಬಹುದು. ವಿಡಿಯೋ ವೇಗವನ್ನು ನಿಯಂತ್ರಿಸಬಹುದು.

ಇದನ್ನೂ ಓದಿ | 10000 ಗಣ್ಯರ ಭಾರತೀಯರ ಮಾಹಿತಿ ಕಲೆ ಹಾಕುತ್ತಿರುವ ಚೀನಾ; ಹೈಬ್ರೀಡ್‌ವಾರ್‌ ನಡೆಸುತ್ತಿದೆಯೇ ನೆರೆಯ ರಾಷ್ಟ್ರ?!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: