ಶಿಯೋಮಿ ತರುತ್ತಿದೆ ಮಾತು ಕೇಳುವ, 30 ದಿನ ಬ್ಯಾಟರಿ ಬಾಳಿಕೆ ಬರುವ ಸ್ಮಾರ್ಟ್‌ ಮೌಸ್‌ !

ಫೋನ್‌, ವಾಚ್‌, ಲ್ಯಾಪ್‌ಟಾಪ್‌, ಟಿವಿಗಳನ್ನು ಕೊಟ್ಟ ಶಿಯೊಮಿ ಈಗ ಹೊಸದೊಂದು ಉತ್ಪನ್ನ ಬಿಡುಗಡೆ ಮಾಡುತ್ತಿದೆ. ವಾಯ್ಸ್‌ ಅಸಿಸ್ಟಂಟ್‌ ಇರುವ ಸ್ಮಾರ್ಟ್‌ ಮೌಸ್‌

ವಿವಿಧ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಪರಿಚಯಿಸುತ್ತಿರುವ ಶಿಯೋಮಿ ಈಗ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿಸಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ ಮೌಸ್‌ ಅನ್ನು ಅಭಿವೃದ್ಧಿಪಡಿಸಿದೆ.
ಶಿಯೋ ಎಐಮೌಸ್‌ ಎಂದು ಕರೆದಿರುವ ಈ ಮೌಸ್‌ ವಾಯ್ಸ್‌ ಅಸಿಸ್ಟಂಟ್‌ ಆಗಿ ಸ್ಪಂದಿಸುತ್ತದೆ. ನೀವು ದನಿಯ ಮೂಲಕ ನೀಡಿದ ಆದೇಶವನ್ನು ಕಾರ್ಯರೂಪಕ್ಕೆ ತರುತ್ತದೆ.

ಮೌಸ್‌ ಮೇಲೆ, ಮಧ್ಯ ಭಾಗದಲ್ಲಿ ಕೆಂಪು ಬಣ್ಣದ ಬಟನ್‌ ಇದ್ದು, ಇದನ್ನು ದೀರ್ಘವಾಗಿ ಒತ್ತಿದರೆ ವಾಯ್ಸ್‌ ಅಸಿಸ್ಟಂಟ್‌ ಸಕ್ರಿಯವಾಗುತ್ತದೆ. ನೀವು ‘ಓಪನ್‌ ವರ್ಡ್‌’ ಎಂದು ಹೇಳಿದರೆ ಅದು, ವರ್ಡ್‌ ಡಾಕ್ಯುಮೆಂಟನ್ನು ಓಪನ್‌ ಮಾಡುತ್ತದೆ. ಹಾಗೆಯೇ ಕಂಪ್ಯೂಟರ್‌ ಶಟ್‌ಡೌನ್‌ ಮಾಡು ಎಂದೂ ಆದೇಶಿಸಬಹುದು.

ಅಷ್ಟೇ ಅಲ್ಲ, ಚೈನೀಸ್‌ ನಿಂದ ಇಂಗ್ಲಿಷ್‌ಗೆ, ಜಾಪನೀಸ್‌ಗೆ ಮತ್ತು ಕೊರಿಯನ್‌ ಭಾಷೆಗೆ ಅನುವಾದ ಮಾಡಿಕೊಡಬಲ್ಲದು ಕೂಡ. 750 ಎಂಎಎಚ್‌ ಬ್ಯಾಟರಿ ಇರುವ ಈ ಮೌಸ್‌ ಒಮ್ಮೆ ಚಾರ್ಜ್‌ ಮಾಡಿದರೆ 30 ದಿನಗಳ ಕಾಲ ಸತತವಾಗಿ ಕೆಲಸ ಮಾಡಬಲ್ಲದು.

ಇದರಲ್ಲಿ 4000 ಡಿಪಿಐ ಹೈ ಪ್ರಿಸಿಷನ್‌ ಸೆನ್ಸಾರ್‌ ಇರುವುದರಿಂದ ಇದನ್ನು, ಪಾರದರ್ಶಕದ ಮೇಲ್ಮೈಗಳ ಮೇಲೆ, ಅಂದರೆ ಗಾಜಿನ ಮೇಲಿಟ್ಟೂ ಬಳಸಬಹುದು.

ಇನ್ನೊಂದು ವಿಶೇಷವೆಂದರೆ ಒಂದೇ ಮೌಸನ್ನು ಎರಡು ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಬಹುದು. ಮೌಸ್‌ನಲ್ಲಿರುವ ರೈಟ್‌ ಮತ್ತು ಲೆಫ್ಟ್‌ ಕೀಗಳನ್ನು ಮೂರು ಸೆಕೆಂಡ್‌ಗಳ ಕಾಲ ಒತ್ತಿ ಹಿಡಿದರೆ ಒಂದು ಕಂಪ್ಯೂಟರ್‌ನಿಂದ ಇನ್ನೊಂದು ಕಂಪ್ಯೂಟರ್‌ಗೆ ಬದಲಿಸಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: