You should setup NX Bar properly

ವಾಟ್ಸ್‌ಆಪ್‌ಗೂ ಬರಲಿದೆ ಫೇಸ್‌ಬುಕ್‌ ಮಾದರಿಯ ಎಮೋಜಿ ರಿಯಾಕ್ಷನ್‌ ಫೀಚರ್‌

ಫೇಸ್‌ಬುಕ್‌ನಲ್ಲಿ ಲೈಕ್‌ ಒತ್ತುವ ಬದಲು, ಹಾರ್ಟ್‌, ಸ್ಮೈಲಿ, ಇತ್ಯಾದಿ ಎಮೋಜಿಗಳ ಮೂಲಕ ನಿಮ್ಮ ಪ್ರತಿಕ್ರಿಯೆ ನೀಡಿದ್ದೀರಿ. ಈಗ ಇದೇ ಫೀಚರ್‌ ವಾಟ್ಸ್‌ ಆಪ್‌ಗೂ ಬರುತ್ತಿದೆ

 

ಜಗತ್ತಿನಲ್ಲಿ ವಾಟ್ಸ್‌ಆಪ್‌ ಬಳಕೆದಾರರ ಸಂಖ್ಯೆ ಕೋಟಿಗಟ್ಟಲೆ. ಆದರೂ ಅದರಲ್ಲಿ ಇತರೆ ಪ್ರತಿಸ್ಪರ್ಧಿಗಳು ನೀಡುತ್ತಿರುವ ಫೀಚರ್‌ಗಳು ಇಲ್ಲ. ಅಷ್ಟೇ ಏಕೆ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿರುವ ಫೀಚರ್‌ಗಳು ಇದರಲ್ಲಿ ಇಲ್ಲ. ಆದರೆ ಇನ್ನು ದೂರಬೇಕಿಲ್ಲ. ವಾಟ್ಸ್‌ಆಪ್‌ನಲ್ಲೂ ಎಮೋಜಿಗಳ ಮೂಲಕ ಪ್ರತಿಕ್ರಿಯಿಸುವ ಅವಕಾಶ ಲಭ್ಯವಾಗಲಿದೆ.

ಬಹುತೇಕ ಮೆಸೇಜಿಂಗ್‌ ಆಪ್‌ಗಳಲ್ಲಿ ಪದಗಳಲ್ಲಿ ಹೇಳಲಾಗದ, ಹೇಳಲಿಚ್ಛಿಸಿದ ಭಾವಗಳನ್ನು ಬರಿಯ ಎಮೋಜಿಗಳ ಮೂಲಕ ಹೇಳುವ ಅವಕಾಶವಿದೆ. ಈಗ ವಾಟ್ಸ್‌ಆಪ್‌ ಕೂಡ ಈ ಫೀಚರ್‌ ಪರಿಚಯಿಸುತ್ತಿದೆ.

ಆಯ್ದ ಬಳಕೆದಾರರಲ್ಲಿ ಈ ಫೀಚರ್‌ ಪ್ರಯೋಗಿಸಲ್ಪಡುತ್ತಿದ್ದು, ನಿಮ್ಮ ಪ್ರತಿಕ್ರಿಯೆಗಳನ್ನು ತರಹೇವಾರಿ ಎಮೋಜಿಗಳ ಮೂಲಕ ಪ್ರತಿಕ್ರಿಯಿಸಬಹುದು. ಅಧಿಕೃತ ಯಾವಾಗ ಇದು ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ ಎಂಬುದನ್ನು ವಾಟ್ಸ್‌ಆಪ್‌ ಇನ್ನು ಬಹಿರಂಗಮಾಡಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: