ವಿಡಿಯೋ |ಆಕಾಶದಿಂದ ಭೂಮಿ ಹೇಗೆ ಕಾಣುತ್ತದೆ ನೋಡಿದ್ದೀರಾ? ಇಲ್ಲಿದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ 24×7 ನೇರ ಪ್ರಸಾರ !

ಭೂಮಿಯಿಂದ ಸುಮಾರು 400 ಕಿಮೀ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಹೇಗೆ ಕಾಣುತ್ತದೆ ಗೊತ್ತಾ? ಗಗನಯಾತ್ರಿಗಳು ಆಕಾಶದಲ್ಲಿ ನಡೆಯುವುದು ಹೇಗೆ ನೋಡಿದ್ದೀರಾ? ಈ 24×7 ನೇರ ಪ್ರಸಾರ ನೋಡಿ

ನಾಸಾ ಕಳೆದ ಮೇ 28ರಿಂದ ಖಗೋಳದ ಬಗ್ಗೆ ಆಸಕ್ತಿ ಇರುವವರಿಗೆ ಹಬ್ಬದೂಟ ನೀಡುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ನೇರ ಪ್ರಸಾರವನ್ನು ಆರಂಭಿಸಿದ್ದು, ಕೇಂದ್ರದಿಂದ ಭೂಮಿ ಹೇಗೆ ಕಾಣುತ್ತದೆ? ಗಗನಯಾನಿಗಳ ಹೇಗೆ ನಡೆದಾಡುತ್ತಾರೆ ಎಂಬುದನ್ನೆಲ್ಲಾ ನೋಡಬಹುದಾಗಿದೆ.

ದಿನದ 24 ಗಂಟೆಗಳ ಕಾಲ ಭೂಮಿಯತ್ತ ಮುಖ ಮಾಡಿರುವ ಕ್ಯಾಮೆರಾಗಳು ದೃಶ್ಯಗಳನ್ನು ಸೆರೆಹಿಡಿದು ಬಿತ್ತರಿಸುತ್ತಿದ್ದು, ಅಂಗೈಯಲ್ಲೇ ಬಾಹ್ಯಾಕಾಶವನ್ನೂ, ಅಲ್ಲಿಂದ ಕಾಣುವ ಭೂಮಿಯನ್ನು ನೋಡಿ ಆನಂದಿಸುವ, ಕಲಿಯುವ, ತಿಳಿಯುವ ಅವಕಾಶವನ್ನು ನಾಸಾ ಕಲ್ಪಿಸಿದೆ.
ಗಂಟೆಗೆ 27600 ಕಿ.ಮೀ ವೇಗದಲ್ಲಿ ಸುತ್ತುವ ಈ ಕೇಂದ್ರ ಕೇವಲ 92 ನಿಮಿಷಗಳಲ್ಲಿ ಭೂಮಿಯನ್ನು ಸುತ್ತು ಹಾಕುತ್ತದೆ. ಹಾಗಾಗಿ ಪ್ರತಿ 45 ನಿಮಿಷಗಳಿಗೆ ಒಮ್ಮೆ ಭೂಮಿಯ ಕತ್ತಲ ಭಾಗಕ್ಕೆ (ಅಂದರೆ ರಾತ್ರಿಯ ಹೊತ್ತು) ಬರುವುದರಿಂದ ಆ ಸಂದರ್ಭದಲ್ಲಿ ರೆಕಾರ್ಡ್‌ ಆದ ವಿಡಿಯೋವನ್ನು ಪ್ರಸಾರ ಮಾಡುತ್ತದೆ. ಉಳಿದ ಸಮಯದಲ್ಲಿ ನೇರ ಪ್ರಸಾರವಿರುತ್ತದೆ.
ರಿಯಲ್‌ಟೈಮ್‌ ಟ್ರ್ಯಾಕರ್‌ ಹೆಸರಿನಲ್ಲಿ ಈ ದೃಶ್ಯಗಳು ಯೂಟ್ಯೂಬ್‌ನಲ್ಲಿ ಬಿತ್ತರವಾಗುತ್ತಿದ್ದು,

ನೀವು ನೋಡಿ ಆನಂದಿಸಿ:

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: