ಟಿಕ್‌ಟಾಕ್ ಖರೀದಿಸಲಿದೆ ಜಿಯೋ? ಮಾತುಕತೆ ಆರಂಭಿಸಿದ ರಿಲಯನ್ಸ್-ಬೈಟ್‌ಡ್ಯಾನ್ಸ್‌!

ಈಗಾಗಲೇ ಭಾರತದಲ್ಲಿ ನಿಷೇಧಕ್ಕೆ ಗುರಿಯಾಗಿರುವ ಚೀನಾ ಮೂಲಕದ ಶಾರ್ಟ್‌ ವಿಡಿಯೋ ಆಪ್ ಟಿಕ್‌ಟಾಕ್ ಮತ್ತೆ ಭಾರತದಲ್ಲಿ ಕಾರ್ಯಚರಣೆಯನ್ನು ಆರಂಭಿಸಲು ತೆರೆಮರೆಯಲ್ಲಿ ಸಿದ್ಧತೆಯನ್ನು ನಡೆಸುತ್ತಿದೆ.

ಮೂಲಗಳು ತಿಳಿಸಿರುವಂತೆ ಟಿಕ್‌ಟಾಕ್ ಮಾತೃ ಸಂಸ್ಥೆ ಚೀನಾದ ಬೈಟ್‌ಡ್ಯಾನ್ಸ್‌,  ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಸದ್ದು ಮಾಡುತ್ತಿರುವ ರಿಲಯನ್ಸ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಹಾತೋರೆಯುತ್ತಿದೆ ಎನ್ನುವ ಮಾತು ಕೇಳಿಬಂದಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭವನ್ನು ಖಂಡಿರುವ ಚೀನಾ ಕಂಪನಿ ಸುಲಭವಾಗಿ ಸೋಲೊಪ್ಪಿಕೊಳ್ಳದೆ, ಭಾರತದಲ್ಲಿನ ಟಿಕ್‌ಟಾಕ್‌ ಅನ್ನು ರಿಲಯನ್ಸ್‌ಗೆ ಮಾರಾಟ ಮಾಡುವ ಆಲೋಚನೆಯಲ್ಲಿದೆ ಎಂದು ಟೆಕ್‌ ಕಂಚ್ ವರದಿ ಮಾಡಿದೆ.

ಉಭಯ ಕಂಪನಿಗಳು ಕಳೆದ ತಿಂಗಳ ಕೊನೆಯಲ್ಲಿ ಮಾತುಕತೆಯನ್ನು ಪ್ರಾರಂಭಿಸಿದ್ದು ಮತ್ತು ಇನ್ನೂ ಒಪ್ಪಂದಕ್ಕೆ ಬಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಟಿಕ್‌ಟಾಕ್‌ ಅಮೇರಿಕಾದಲ್ಲಿಯೂ ನಿಷೇಧಕ್ಕೆ ಗುರಿಯಾಗಿರುವ ಹಿನ್ನಲೆಯಲ್ಲಿ ಚೀನಾದ ಬೈಟ್‌ಡ್ಯಾನ್ಸ್‌ ತನ್ನ ಪ್ರಾಡೆಕ್ಟ್‌ ಅನ್ನು ಮೆಕ್ರೋಸಾಫ್ಟ್‌ಗೆ ಮಾರಾಟಮಾಡುವ ಆಲೋಚನೆಯಲ್ಲಿದೆ. ಇದೇ ಮಾದರಿಯಲ್ಲಿ ಭಾತರದಲ್ಲಿಯೂ ವ್ಯವಹಾರವನ್ನು ಕುದುರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: