ಗೂಗಲ್ ತನ್ನ ಬಳಕೆದಾರರಿಗೆ ತಮ್ಮ ಫೋನ್ಗಳ ಆಪರೇಟಿಂಗ್ ಸಿಸ್ಟಮ್ಅನ್ನು ಆಂಡ್ರಾಯ್ಡ್ 3.0ಗೆ ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚಿಸಿದ್ದು, ಇಲ್ಲವಾದಲ್ಲಿ ಗೂಗಲ್ನ ಜಿಮೇಲ್, ಮ್ಯಾಪ್ ಯೂಟ್ಯೂಬ್ ಸೇವೆ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಆಂಡ್ರಾಯ್ಡ್ 3.0ಗಿಂತ ಕೆಳಗಿನ ಆವೃತ್ತಿಗಳನ್ನು ಬಳಸುತ್ತಿರುವವರಿಗೆ ಫೋನ್ಗೆ ಜಿಮೇಲ್ ಸೇವೆ ಸ್ಥಗಿತಗೊಂಡರೆ, ಸೈನ್ ಇನ್ ಆಗುವುದಕ್ಕೂ ಅವಕಾಶವಾಗುವುದಿಲ್ಲ. ಹೀಗಾಗಿ ಇತರೆ ಆಪ್ಗಳನ್ನು ಬಳಸಲೂ ಆಗುವುದಿಲ್ಲ.
ಆಂಡ್ರಾಯ್ಡ್ 2.3.7, 2010ರ ಡಿಸೆಂಬರ್ನಲ್ಲಿ ಬಿಡುಗಡೆಯಾಗಿತ್ತು. ಈಗ ಬಹುತೇಕ ಫೋನ್ಗಳು ಆಂಡ್ರಾಯ್ಡ್ 9 ಮತ್ತು 10ನೇ ಆವೃತ್ತಿಯನ್ನು ಬಳಸುತ್ತಿವೆ. ಒಂದು ವೇಳೆ ಲಾಗಿನ್ ಆಗಲು ಪ್ರಯತ್ನಿಸಿದರೆ, ನಿಮಗೆ ಎರರ್ ಸಂದೇಶ ಬರಬಹುದು ಎಂದು ಗೂಗಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯಾವ ಫೋನ್ಗಳಿಗೆ ಈ ಸೇವೆ ಸ್ಥಗಿತಗೊಳ್ಳಲಿದೆ?
- ಸೋನಿ ಎಕ್ಸ್ಪೀರಿಯಾ ಅಡ್ವಾನ್ಸ್
- ಲೆನೊವೊ ಕೆ800
- ಸೋನಿ ಎಕ್ಸ್ಪೀರಿಯಾ ಗೋ
- ವೊಡಾಫೋನ್ ಸ್ಮಾರ್ಟ್ -2
- ಸ್ಯಾಮ್ಸಂಗ್ ಗ್ಯಾಲೆಕ್ಸಿ ಎಸ್2
- ಸೋನಿ ಎಕ್ಸ್ಪೀರಿಯಾ ಪಿ,
- ಎಲ್ಜಿ ಸ್ಪೆಕ್ಟ್ರಮ್,
- ಸೋನಿ ಎಕ್ಸ್ಪೀರಿಯಾ ಎಸ್
- ಎಲ್ ಜಿ ಪ್ರೆಡಾ 3.0
- ಎಚ್ಟಿಸಿ ವೆಲೊಸಿಟಿ
- ಎಚ್ಟಿಸಿ ಎವೊ 4ಜಿ
- ಮೊಟೊರೊಲಾ ಫೈರ್
- ಮೊಟೊರೊಲಾ ಎಕ್ಸ್ಟಿ532