ವಾಟ್ಸ್ಆಪ್ ಖಾಸಗಿ ನೀತಿಗಳನ್ನು ಬದಲಿಸಿ ಬಹುದೊಡ್ಡ ಸಂಖ್ಯೆಯಲ್ಲಿ ಬಳಕೆದಾರರನ್ನು ಕಳೆದುಕೊಂಡಿದ್ದ ಫೇಸ್ಬುಕ್ಗೆ ಭಾನುವಾರ ಮತ್ತೊಂದು ಆಘಾತವಾಗಿದೆ. ಆರುಗಂಟೆಗಳ ಕಾಲ ಫೇಸ್ಬುಕ್, ವಾಟ್ಸ್ಆಪ್, ಇನ್ಸ್ಟಾಗ್ರಾಮ್, ಮೆಸೇಂಜರ್ ಸೇವೆಯಲ್ಲಿ ವ್ಯತ್ಯಯವಾಗಿದ್ದರಿಂದ 70 ಲಕ್ಷ ಬಳಕೆದಾರರು ಟೆಲಿಗ್ರಾಮ್ಗೆ ಗುಳೆ ಹೋಗಿದ್ದಾರೆ!
ಟೆಲಿಗ್ರಾಮ್ ಸ್ಥಾಪಕ, ಉದ್ಯಮಿ ಪಾವೆಲ್ ಡುರೋಫ್ ಈ ಕುರಿತು ಹೇಳಿಕೆ ನೀಡಿದ್ದಾರೆ.
‘ನಿನ್ನೆ (ಮಂಗಳವಾರ) ಟೆಲಿಗ್ರಾಮ್ ದಾಖಲೆಯ ಹೆಚ್ಚಳವನ್ನು ಕಂಡಿದೆ. ಒಂದೇ ದಿನದಲ್ಲಿ 70 ಲಕ್ಷ ಬಳಕೆದಾರರನ್ನು ನಾವು ಸ್ವಾಗತಿಸಿದ್ದೇವೆ. ಈ ಪ್ರಮಾಣದ ಹೆಚ್ಚಳವನ್ನು ನನ್ನ ತಂಡವೂ ಯಾವುದೇ ಲೋಪವಿಲ್ಲದೆ ನಿರ್ವಹಿಸಿದ್ದು ಹೆಮ್ಮೆ ತಂದಿದೆ. ಈ ಅವಧಿಯಲ್ಲಿ ಅಮೆರಿಕದ ಬಳಕೆದಾರರು ಸ್ವಲ್ಪ ನಿಧಾನಗತಿಯ ಸೇವೆಯನ್ನು ಕಂಡಿರಬಹುದು.
ಈಗಾಗಲೇ ಬಳಕೆ ಮಾಡುತ್ತಿರುವ ಟೆಲಿಗ್ರಾಂ ಬಳಕೆದಾರರು, ಹೊಸ ಸ್ನೇಹಿತರನ್ನು ಸ್ವಾಗತಿಸಿ, ನಮ್ಮಲ್ಲಿ ಏನೇನು ಇದೆ ಎಂಬುದನ್ನು ತಿಳಿಸಿ. ಯಾಕೆ ಬೆಳಕಿನ ವರ್ಷದಷ್ಟು ಮುಂದಿದೆ ಇದೆ ಎಂಬುದನ್ನು ಮನವರಿಕೆ ಮಾಡಿಕೊಡಿ” ಎಂದು ಬರೆದಿದ್ದಾರೆ.