Techಮಾತು -1 | ನಿಮ್ಮ ಮೊಬೈಲ್‌ ಸುರಕ್ಷಿತವಾಗಿರಿಸಿಕೊಳ್ಳಲು ಇಲ್ಲಿವೆ 8 ಮಾರ್ಗಗಳು

ಮೊಬೈಲ್‌ನ ಎಲ್ಲ ರೀತಿಯ ಸಂವಹನದ ಸಾಧನವಾಗಿದೆ. ಜೊತೆಗೆ ಬ್ಯಾಂಕಿಂಗ್‌, ಶಾಪಿಂಗ್‌ ಸೇರಿದಂತೆ ವಿವಿಧ ವ್ಯವಹಾರಗಳಿಗೂ ಬಳಕೆಯಾಗುತ್ತಿದೆ. ಹಾಗಾಗಿ ಹ್ಯಾಕಿಂಗ್‌, ಫಿಶಿಂಗ್‌ಗೆ ದಾಳಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚು. ಈ ಹಿನ್ನೆಲೆಯಲ್ಲಿ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮೊದಲ ಆದ್ಯತೆ. ಅದಕ್ಕಾಗಿ ಎಂಟು ಮಾರ್ಗಗಳನ್ನು ತೇಜೇಶ್‌ ಇಲ್ಲಿ ಸೂಚಿಸಿದ್ದಾರೆ

ಪಾಡ್‌ಕಾಸ್ಟರ್‌ ಕುರಿತು

ಪಾಡ್‌ಕಾಸ್ಟರ್‌ ಕುರಿತುತೇಜೇಶ್‌ ಜಿ ಎನ್‌, ಮೂಲತಃ ತಂತ್ರಜ್ಞ. ಹಲವು ಆಸಕ್ತಿಕರ ವಿಷಯಗಳಲ್ಲಿ ಸಕ್ರಿಯರಾಗಿರುವ ಇವರು ಮಾಹಿತಿ, ಮಾಹಿತಿ ಸುರಕ್ಷತೆ, ಆನ್‌ಲೈನ್‌ ಖಾಸಗಿತನ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ವಿಟಿಯುನಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿರುವ ಇವರು ಸೀಮನ್ಸ್‌, ಇನ್‌ಫೋಸಿಸ್‌ ಟೆಕ್ನಾಲಜಿಸ್‌, ಜನಾಗ್ರಹ, ಬಝ್‌ ಇಂಡಿಯಾ, ನೆಕ್ಸ್ಟ್‌ಡ್ರಾಪ್‌ ಸಂಸ್ಥೆಗಳಲ್ಲಿ ಟೆಕ್‌ ಮ್ಯಾನೇಜರ್‌, ಟೆಕ್ನಾಲಜಿಸ್ಟ್‌, ಟೆಕ್ನಿಕಲ್‌ ಆರ್ಕಿಟೆಕ್ಟ್‌ ಜವಾಬ್ದಾರಿಗಳನ್ನುನಿರ್ವಹಿಸಿದ್ದಾರೆ. ಮಾಹಿತಿ ವಿಜ್ಞಾನ, ಮುಕ್ತ ಮಾಹಿತಿಗಾಗಿ ಹೋರಾಡುತ್ತಿರುವ ಡಾಟಾಮೀಟ್‌ ಟ್ರಸ್ಟ್‌ ಸಂಸ್ಥಾಪಕರು. 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: