ಈ ಘಟನೆ ನಡೆದಿದ್ದು1994ರಲ್ಲಿ. ಇನ್ನೇನು ಆಕಾಶಕ್ಕೆ ಜಿಗಿಯಬೇಕಾಗಿದ್ದ ಪಿಎಸ್ಎಲ್ಪಿ ರಾಕೆಟ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಇಸ್ರೋದ ಇಬ್ಬರು ಹಿರಿಯ ವಿಜ್ಞಾನಿಗಳ ಜೊತೆಗೆ ಒಬ್ಬ ಕಿರಿಯ ಎಂಜಿನಿಯರ್ ಸಮಸ್ಯೆ ಪರಿಹರಿಸುವುದಕ್ಕೆ ಜೊತೆಯಾದರು.
ಕ್ಷಣಗಣನೆ ಮುಗಿದು ಇನ್ನೇನು ರಾಕೆಟ್ ಹಾರಬೇಕಿತ್ತು, ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದಾಗಿ ರಾಕೆಟ್ ಉಡಾವಣೆ ಬಹುತೇಕ ನಿಲ್ಲಿಸುವ ಹಂತ ತಲುಪಿತ್ತು. ರಾಕೆಟ್ ಇದ್ದ ಸ್ಥಿತಿಯಲ್ಲೇ ಸಮಸ್ಯೆ ಬಗೆಹರಿಸುವುದು ಸುಲಭವಲ್ಲ ಎಂಬ ಕಾರಣಕ್ಕೆ. 200 ಟನ್ಗಳಷ್ಟು ಅಪಾಯಕಾರಿ ಇಂಧನ ಮತ್ತು ರಾಸಾಯನಿಗಳು ತುಂಬಿದ್ದ ರಾಕೆಟ್ ಅದು.
ಇಂತಹ ಸ್ಥಿತಿಯಲ್ಲಿ ಕೆಲವೇ ನಿಮಿಷಗಳಲ್ಲಿ ಸಮಸ್ಯೆ ಬಗೆಹರಿಸಿ, ಪಿಎಸ್ಎಲ್ವಿ ಯಶಸ್ವಿ ಉಡಾವಣೆಯನ್ನು ಸಾಧ್ಯವಾಗಿಸಿದ್ದು ಆ ಕಿರಿಯ ಎಂಜಿನಿಯರ್. ಅವರೇ ಎಸ್ ಸೋಮನಾಥ್. ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ 11ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕೆ ಶಿವನ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.
GoI appoints S. Somanath to the post of Secretary, Department of Space and Chairman, Space Commission (ISRO) for a combined tenure of three years from the date of joining of the post… pic.twitter.com/Tq20WUQILD
— ANI (@ANI) January 12, 2022
ದಕ್ಷಿಣ ಕೇರಳದ ಅಲಪ್ಪುಳದವರಾದ ಎಸ್ ಸೋಮನಾಥ್ ಮಲಯಾಳಂ ಮಾಧ್ಯಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಹಿಂದಿ ಶಿಕ್ಷಕರಾದ ಮಗನಾದ ಸೋಮನಾಥ್ ವಿಜ್ಞಾನದೆಡೆಗೆ ಆಸಕ್ತಿ ತೋರಿದರು. ಕೊಲ್ಲಂನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಬಿ ಟೆಕ್ ಪದವಿ ಪಡೆದರು.
Congratulations to VSSC Director, S Somanath, on being appointed as Chairman, @isro and Secretary, Department of Space. Proud that Kerala has contributed one more illustrious citizen to lead India's space programme. Best wishes for a fruitful and innovative tenure. pic.twitter.com/3ohDwclB5Z
— Pinarayi Vijayan (@vijayanpinarayi) January 12, 2022
ಪದವಿ ಅಂತಿಮ ವರ್ಷದಲ್ಲಿದ್ದಾಗಲೇ ಇಸ್ರೋಕ್ಕೆ ಉದ್ಯೋಗ ಅರಸಿ ಅರ್ಜಿ ಹಾಕಿದರು. ಪಿಎಸ್ಎಲ್ವಿ ಯೋಜನೆಗಾಗಿಯೇ ಕಿರಿಯ ಎಂಜಿನಿಯರ್ಗಳನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಎಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕ ಮತ್ತು ರಾಕೆಟ್ ವಿಜ್ಞಾನದಲ್ಲಿ ಉತ್ತಮ ಜ್ಞಾನ ಪಡೆದಿದ್ದ ಸೋಮನಾಥ್ಗೆ ಇಸ್ರೋದಲ್ಲಿ ಕೆಲಸ ಸಿಕ್ಕಿತು. ನಂತರದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು.
Congratulations to VSSC Director Dr. S Somanath on being appointed as @isro Chairman! pic.twitter.com/VlVG1nU0lA
— ISRO Spaceflight (@ISROSpaceflight) January 12, 2022
1985ರಲ್ಲಿ ವಿಕ್ರಮ್ ಸಾರಾಭಾಯಿ ಸ್ಪೇಸ್ ಎಂಟರ್ನಲ್ಲಿ ಕೆಲ ಕಾಲ ಕೆಲಸ ಮಾಡಿದ ಸೋಮನಾಥ್ ಜಿಎಸ್ಎಲ್ವಿ ಎಂಕೆ -3ಯೋಜನೆಯಲ್ಲಿ ಯೋಜನಾ ನಿರ್ದೇಶಕರಾಗಿ ನಾಲ್ಕು ವರ್ಷಕಾರ್ಯನಿರ್ವಹಿಸಿದರು. ಉಡಾವಣೆ ನೌಕೆಗಳ ತಜ್ಞರಾಗಿ ಹೆಸರುಮಾಡಿದ ಸೋಮನಾಥ್ ರಾಕೆಟ್ಗಳ ರಚನಾ ವಿನ್ಯಾಸ, ಪ್ರೊಪಲ್ಷನ್ ಹಂತಗಳು ಇತ್ಯಾದಿ ವಿನ್ಯಾಸಗಳಲ್ಲಿ ನಿಷ್ಣಾತರಾದರು.
ಜಿಎಸ್ಎಲ್ವಿಗೆ ದೇಸಿ ಕ್ರೈಯೋಜಿನಿಕ್ ಹಂತಗಳನ್ನು ಅಭಿವೃದ್ಧಿ ಪಡಿಸುವುದಲ್ಲಿ ಸೋಮನಾಥ್ ಅವರ ಕೊಡುಗೆ ಮಹತ್ವದ್ದು. ಚಂದ್ರಯಾನ-2 ಮಹತ್ವದ ಹೊಣೆಯನ್ನು ನಿರ್ವಹಿಸಿದ ಸೋಮನಾಥ್ ಅವರು ದೇಶದ ಕೆಲವೇ ಕೆಲವು ಅನುಭವಿ ರಾಕೆಟ್ ವಿಜ್ಞಾನಿಗಳಾಗಿದ್ದಾರೆ.
ತಿರುವಂತನಪುರಮ್ನಲ್ಲಿ ನಡೆದ ಟೆಡ್ಎಕ್ಸ್ ಸಮಾವೇಶದಲ್ಲಿ ಬಾಹ್ಯಾಕಾಶ ಪ್ರವಾಸದ ಉದ್ಯಮಗಳ ಕುರಿತು ಸೋಮನಾಥ್ ಉಪನ್ಯಾಸ