ಗಗನ ನೌಕೆಗೆ ಭಾರತೀಯ ಮೂಲದ ಗಗನಯಾನಿ ‘ಕಲ್ಪನಾ ಚಾವ್ಲಾ’ ಹೆಸರಿಟ್ಟ ನಾರ್ಥ್ರಾಪ್‌ಗ್ರುಮನ್‌ ಸಂಸ್ಥೆ

ಅಮೆರಿಕದ ಪ್ರಸಿದ್ಧ ಖಗೋಳ ಹಾಗೂ ರಕ್ಷಣ ತಂತ್ರಜ್ಞಾನ ಸಂಸ್ಥೆ ನಾರ್ಥ್ರಾಪ್‌ಗ್ರುಮನ್‌ ಈ ತಿಂಗಳಾಂತ್ಯದಲ್ಲಿ ಉಡಾವಣೆ ಮಾಡಲಿರುವ ನೌಕೆಗೆ ಭಾರತೀಯ ಸಂಜಾತೆ ಕಲ್ಪನಾ ಚಾವ್ಲಾ ಹೆಸರಿಟ್ಟಿದೆ

ಇದೊಂದು ವಿಶೇಷ ಗಳಿಗೆ. ಭಾರತೀಯ ಮೂಲದ ಕಲ್ಪನಾ ಚಾವ್ಲಾ 2003ರಲ್ಲಿ ಕೊಲಂಬಿಯಾ ಗಗನನೌಕೆಯಲ್ಲಿದ್ದಾಗ ತನ್ನ 6 ಸಹವರ್ತಿಗಳೊಂದಿಗೆ ನಿಧನರಾಗಿದ್ದರು. ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಹಿರಿಮೆಗಾಗಿ ಅಮೆರಿಕದ ಜಾಗತಿಕ ಏರೋಸ್ಪೇಸ್‌ ಮತ್ತು ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಂಸ್ಥೆ ನಾರ್ಥ್ರಾಪ್‌ಗ್ರುಮನ್‌ ತನ್ನದೊಂದು ನೌಕೆಗೆ ‘ಎಸ್‌ ಎಸ್‌ ಕಲ್ಪನಾ ಚಾವ್ಲಾ’ ಎಂದು ಹೆಸರಿಸಿದೆ.

‘ನಾಸಾದ ತಂಡದ ಭಾಗವಾಗಿದ್ದು, ಭಾರತೀಯ ಮೂಲದಿಂದ ಬಂದ ಮೊದಲ ಮಹಿಳಾ ಗಗನಯಾತ್ರಿಯಾಗಿ ಕಲ್ಪನಾ ಅವರು ಮಾಡಿದ ಸಾಧನೆ, ನಿರ್ಮಿಸಿದ ಇತಿಹಾಸದ ಗೌರವಾರ್ಥ ಅವರ ಹೆಸರನ್ನು ನಮ್ಮ ನೌಕೆಗೆ ಇರಿಸುತ್ತಿದ್ದೇವೆ ಎಂದು ಸಂಸ್ಥೆಯ ಅಧಿಕೃತ ಟ್ವೀಟ್‌ವೊಂದರಲ್ಲಿ ಪ್ರಕಟಿಸಿದೆ.

“ಇದು ಕಂಪನಿಯು ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ. ಮಾನವ ಗಗನಯಾನದಲ್ಲಿ ಅಪೂರ್ವ ಸಾಧನೆ ಮಾಡಿದ ವ್ಯಕ್ತಿಗಳ ಹೆಸರನ್ನು ಕಂಪನಿಯ ಸೈನಸ್‌ ನೌಕೆಗಳಿಗೆ ಹೆಸರಿಡುತ್ತೇವೆ. ಕಲ್ಪನಾ ಚಾವ್ಲಾ ತಮ್ಮ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮಾಡಿದ ತ್ಯಾಗಕ್ಕೆ ಎಣೆಯಿಲ್ಲ. ಆಕೆಯ ಸಾಧನೆ ಗಗನಯಾತ್ರಿಗಳಿಗೆ ನೀಡುವಂಥದ್ದು. ಕಲ್ಪನಾ ಕೊಲಂಬಿಯಾ ನೌಕೆಯಲ್ಲಿದ್ದಾಗ ಗಗನಯಾನಿಗಳ ಆರೋಗ್ಯ ಮತ್ತು ಸುರಕ್ಷತೆ ಕುರಿತು ಸಂಶೋಧನೆ ನಡೆಸಿದ್ದರು’ ಎಂದು ವಿವರಿಸಿದೆ.

ಕಲ್ಪನಾ ಚಾವ್ಲಾ ಹೆಸರಿನ ಈ ಸೈನಸ್‌ ನೌಕೆಯನ್ನು ಅಂಟಾರೆಸ್‌ ಹೆಸರಿನ ರಾಕೆಟ್‌ ಹೊತ್ತೊಯ್ಯಲಿದೆ. ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಲಿದ್ದು ಸೆಪ್ಟೆಂಬರ್‌ 29ರಂದು ವರ್ಜಿನಿಯಾ ನಾಸಾ ವಾಲೋಪ್ಸ್‌ ಉಡಾವಣಾ ಕೇಂದ್ರ ಆಕಾಶಕ್ಕೆ ಜಿಗಿಯಲಿದೆ.
ಸುಮಾರು 3000 ಕೆ ಜಿ ತೂಕದ ವಸ್ತುಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಪೂರೈಸಲೆಂದು ಈ ನೌಕೆ ಉಡಾವಣೆಯಾಗುತ್ತಿದೆ.

ಕಲ್ಪನಾ ಚಾವ್ಲಾ ಕುರಿತ ಸಾಕ್ಷ್ಯಚಿತ್ರ:

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.