You should setup NX Bar properly

LG ವಿಂಗ್: ಎರಡು ಸ್ಕ್ರಿನ್ ಹೊಂದಿರುವ ತಿರುಗಿಸಬಹುದಾದ ಸ್ಮಾರ್ಟ್‌ಫೋನ್

ಸದ್ಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಇದರ ಪರಿಣಾಮವಾಗಿ ಮಡಚುವ, ಇನ್ ಡಿಸ್‌ಪ್ಲೇ ಕ್ಯಾಮೆರಾ ಹೊಂದಿರುವ, ಪಾಪ್ ಅಪ್ ಕ್ಯಾಮೆರಾ ಇರುವ ವಿನ್ಯಾಸಗಲು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದೆ.

ಇದೇ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ತಯಾರಕ LG ಹೊಸದಾಗಿ ರೋಟೆಟ್ ಮಾಡಬಹುದಾದ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ತಯಾರಿಯನ್ನು ನಡೆಸಿದೆ. 

LG ಹೊಸದಾಗಿ ತಿರುಗಿಸಬಹುದುದಾದ(ರೋಟೆಟ್) ಸ್ಮಾರ್ಟ್‌ಫೋನಿಗೆ LG ವಿಂಗ್ ಎಂದು ನಾಮಕರಣವನ್ನು ಮಾಡಿದೆ. ಈ ಸ್ಮಾರ್ಟ್‌ಫೋನ್ ಅನ್ನು ಟಿ ಆಕೃತಿಯಲ್ಲಿ ತಿರುಗಿಸಬಹುದಾಗಿದೆ. 

ಈ ಸ್ಮಾರ್ಟ್‌ಫೋನ್ LG ಎಕ್ಸ್‌ಪ್ಲೋರ್ ಪ್ರಾಜೆಕ್ಟ್‌ನ ಫಲವಾಗಿದ್ದು, ಇದು ಮೊಬೈಲ್ ಡಿವೈಸ್‌ ಗಳಲ್ಲಿ ಹೊಸ ಕ್ಯಾಟಗೇರಿಯನ್ನು ಆರಂಭಿಸಲಿದೆ. ಅಲ್ಲದೇ ಸ್ಮಾರ್ಟ್‌ಫೋನ್ ಬಳಕೆ ಮಾಡುವ ವಿಧಾನಕ್ಕೆ ಹೊಸ ಭಾಷ್ಯವನ್ನು ಬರೆಯಲಿದೆ.  

ಈ ಹೊಸ ತಿರುಗಿಸಬಹುದಾದ ಸ್ಮಾರ್ಟ್‌ಫೋನ್ LG ವಿಂಗ್ ಅನ್ನು ಸೆಪ್ಟೆಂಬರ್ 14 ರಂದು ಲಾಂಚ್ ಮಾಡುವ ಯೋಜನೆ ಇದೆ. 

ಈ ಸ್ಮಾರ್ಟ್‌ಫೋನ್ ಅನ್ನು ಟಿ ಆಕಾರದಲ್ಲಿ ತಿರುಗಿಸಿದ ಸಂದರ್ಭದಲ್ಲಿ ಡಿಸ್‌ಪ್ಲೇ ಮೇಲ್ಭಾಗಕ್ಕೆ ಅಡ್ಡವಾಗಿ ಕಾಣಿಸಿಕೊಳ್ಳಲಿದೆ. ಅದರ ಕೆಳಗೆ ಸೆಕೆಂಡರಿ ಸ್ಕ್ರಿನ್‌ ಇದ್ದು, ಅದು ಕೀಬೋಡ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲಿ ಮೇಸೆಜ್‌ಗಳನ್ನು ಟೈಪ್ ಮಾಡಬಹುದಾಗಿದೆ. 

LG ಹೊಸದಾಗಿ ಮಲ್ಟಿಪಲ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ಗಳನ್ನು ನಿರ್ಮಿಸುವ ಸಲುವಾಗಿ ಸಂಶೋಧನೆಯನ್ನು ನಡೆಸುತ್ತಿದೆ. ಈ ಮಾದರಿಯಲ್ಲಿಯೇ ಈ ಹೊಸ LG ವಿಂಗ್ ಅನ್ನು ತಯಾರು ಮಾಡಿದೆ. ಈ ಸ್ಮಾರ್ಟ್‌ಫೋನ್ ಅನ್ನು $1000ಕ್ಕೆ ಮಾರಾಟ ಮಾಡಲಿದೆ ಎನ್ನಲಾಗಿದೆ. 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: