‘ಎಂಐ ಸ್ಟೋರ್‌ ಆನ್‌ ವೀಲ್ಸ್‌’ಗೆ ಚಾಲನೆ; ಹಳ್ಳಿ ಹಳ್ಳಿಗೂ ಬರಲಿವೆ ಶಿಯೋಮಿ ಸ್ಟೋರ್‌ಗಳು

ಶಿಯೋಮಿ ಬ್ರಾಂಡ್‌ಗೆ ಭಾರತ ಅತಿ ದೊಡ್ಡ ಮಾರುಕಟ್ಟೆ. ಕೇವಲ ನಗರ ಕೇಂದ್ರಿತವಾದ ಈ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಶಿಯೋಮಿ ಮುಂದಾಗಿದೆ. ಅದಕ್ಕಾಗಿ ಎಂಐಸ್ಟೋರ್‌ ಆನ್‌ ವೀಲ್ಸ್‌ ಹೆಸರಿನ ಸಂಚಾರಿ ಸ್ಟೋರ್‌ಗೆ ಚಾಲನೆ ನೀಡಿದೆ

ಭಾರತದ ಹಳ್ಳಿಗಳು ಮತ್ತು ತಲುಪಲಾಗದ ಸ್ಥಳಗಳಿಗೂ ತಮ್ಮ ಬ್ರಾಂಡ್‌ಗಳನ್ನು ಒಯ್ಯುವ ಮಹತ್ವಾಕಾಂಕ್ಷೆಯೊಂದಿಗೆ ಶಿಯೋಮಿ ಇಂದು ಸಂಚಾರಿ ಮಳಿಗೆ, “ಎಂಐ ಸ್ಟೋರ್‌ ಆನ್‌ ವೀಲ್ಸ್‌’ಗೆ ಚಾಲನೆ ನೀಡಿದೆ.

ಕೋವಿಡ್‌ 19ರ ಹಿನ್ನೆಲೆಯಲ್ಲಿ ಗ್ರಾಹಕರು ಮನೆಯಲ್ಲೇ ಬಂಧಿತರಾಗಿದ್ದರು, ಇತ್ತ ಎಲ್ಲ ವ್ಯಾಪಾರಗಳು ಪೆಟ್ಟು ತಿಂದಿದ್ದವು. ಹಾಗಾಗಿ ಗ್ರಾಹಕರ ಮನೆಬಾಗಿಲಿಗೇ ಸೇವೆಯನ್ನು ಒಯ್ಯುವ ಪ್ರಯತ್ನವಾಗಿ ಶಿಯೋಮಿ ಈ ಆಫ್‌ಲೈನಿನ ಹೊಸ ಆಲೋಚನೆಗೆ ಚಾಲನೆ ನೀಡಿದೆ.

ಶಿಯೋಮಿಯ ಜಾಗತಿಕ ಉಪಾಧ್ಯಕ್ಷ ಹಾಗೂ ಭಾರತದ ಕಾರ್ಯಚಟುವಟಿಕೆಗಳ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ಈ ಕುರಿತು ಟ್ವೀಟ್‌ ಮಾಡಿದ್ದು, ಸಂಚಾರಿ ಮಳಿಗೆಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಮಳಿಗೆಗಳಲ್ಲಿ ಏನೆಲ್ಲಾ ಸಿಗುತ್ತದೆ? ಸ್ಮಾರ್ಟ್‌ ಫೋನ್‌ಗಳು, ಸ್ಮಾರ್ಟ್‌ ಟಿವಿ, ಎಂಐ ಬಾಕ್ಸ್‌ 4ಕೆ, ಎಂಐ ಟಿವಿ ಸ್ಟಿಕ್‌, ಎಂಐ ಸಿಸಿಟಿವಿ, ಕ್ಯಾಮೆರಾ, ಬ್ಲೂಟೂತ್‌ ಇಯರ್‌ಫೋನ್, ರೆಡ್‌ ಮಿ ಇಯರ್‌ ಬಡ್ಸ್‌, ಪವರ್‌ ಬ್ಯಾಂಕ್‌ಗಳು, ಚಾರ್ಜರ್‌ಗಳು ದೊರೆಯಲಿವೆ.

ಇದನ್ನೂ ಓದಿ | ದಿ ಸೋಷಿಯಲ್‌ ಡಿಲೆಮಾ | ಈ ಸಾಕ್ಷ್ಯಚಿತ್ರ ನೋಡಿದ ಮೇಲೆ, ಸೋಷಿಯಲ್‌ ಮಿಡಿಯಾ ಬಳಸುವ ಮುನ್ನ ಯೋಚಿಸುತ್ತೀರಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: