ಗ್ರಾಹಕರನ್ನು ಸೆಳೆಯಲು ಹಲವು ಪ್ರಯೋಗಗಳನ್ನು ಮಾಡುತ್ತಲೇ ಇದೆ. ಈಗ ಹೊಸ ಎರಡು ಮಾಡೆಲ್ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಂಐ11ಎಕ್ಸ್ ಸರಣಿಯ ಈ ಫೋನ್ಗಳು ಆಕರ್ಷಕವಾಗಿವೆ.

ಎಂ ಐ ಆಲ್ಟ್ರಾ ಜೊತೆಗೆ ಶಿಯೋಮಿ ಇಂದು ಎಂ ಐ 11 ಎಕ್ಸ್ ಸರಣಿಯನ್ನು ಬಿಡುಗಡೆಗೊಳಿಸಿದೆ. ಈ ಸರಣಿಯಲ್ಲಿ ಎಂಐ 11ಎಕ್ಸ್ ಮತ್ತು ಎಂಐ 11ಎಕ್ಸ್ ಪ್ರೊ. ಇವುಗಳ ಆರಂಭಿಕ ಬೆಲೆ 29,999ರೂ.ಗಳು. ಈ ಮೊಬೈಲ್ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡುವ ಗುರಿಯನ್ನು ಚೈನಾದ ಈ ದೈತ್ಯ ಕಂಪನಿ ಹೊಂದಿದೆ. ಭಾರತದಲ್ಲಿ ಎಂ ಐ 11 ಎಕ್ಸ್ ಸರಣಿಯು ರೆಡ್ಮಿ ಕೆ 40 ರ ಸ್ಮಾರ್ಟ ಫೋನ್ಗಳ ಹೊಸ ಆವೃತ್ತಿಯಾಗಿದೆ. ಈ ಎರಡು ಫೋನ್ಗಳಲ್ಲಿ ವಿಶೇಷವೇನಿದೆ ನೋಡೋಣ.
ಎಂ ಐ 11 ಎಕ್ಸ್
ಕಳೆದ ತಿಂಗಳು ಶಿಯೊಮಿ ತನ್ನ ರೆಡ್ಮಿ ಕೆ40 ಫೋನ್ಅನ್ನು ಎಂಐ 11ಎಕ್ಸ್ ಎಂದು ಮರುನಾಮಕರಣ ಮಾಡಿತು. Qualcomm Snapdragon 870 ಚಿಪ್ ಸೆಟ್ ಇರುವ ಈ ಫೋನ್ 8 ಜಿಬಿ LPDDR5 ರ್ಯಾಮ್ ಮತ್ತು 128 ಜಿ.ಬಿ ಸ್ಟೋರೇಜ್ ಹೊಂದಿದೆ. 5ಜಿ ಕನೆಕ್ಟಿವಿಟಿಯನ್ನು ಬೆಂಬಲಿಸುವ ಸಾಮರ್ಥ್ಯವಿರುವ ಈ ಫೋನಿನಲ್ಲಿ ಆಂಡಾಯ್ಡ್ 11 ಕಾರ್ಯನಿರ್ವಹಿಸುತ್ತದೆ.
6.67 ಇಂಚಿನ ವಿಸ್ತಾರದ, ಎಚ್ಡಿ ಮತ್ತು ಎ4 ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ನ್ನು ಕ್ಯಾಮೆರಾಗಳ ವಿಷಯಕ್ಕೆ ಬಂದರೆ ಬಳಕೆದಾರರಿನಿಗೆ ಖುಷಿಯಾಗುವ ವಿಷಯಗಳಿವೆ. 20 ಮೆಗಾಪಿಕ್ಸೆಲ್ ಪಂಚ್ಹೋಲ್ ಸೆಲ್ಫಿ ಕ್ಯಾಮೆರಾ, ಹಾಗೂ ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ನ ಸೋನಿ ಐಎಂಎಕ್ಸ್582 ಸೆನ್ಸಾರ್ ಇರುವ ಕ್ಯಾಮೆರಾ, ಹೆಚ್ಚುವರಿಯಾಗಿ 8 ಮೆಗಾ ಪಿಕ್ಸೆಲ್ನ ವೈಡ್ ಲೆನ್ಸ್ ಮತ್ತು 5 ಮೆಗಾ ಪಿಕ್ಸೆಲ್ನ ಮ್ಯಾಕ್ರೊ ಲೆನ್ಸ್ ಇದೆ.
ಉತ್ಕೃಷ್ಟ ಗುಣಮಟ್ಟದ ಆಡಿಯೋ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಡಾಲ್ಬಿ ಅನುಭವವನ್ನು ಬಳಕೆದಾರರು ಪಡೆದುಕೊಳ್ಳಬಹುದು. ಇನ್ನು ಬ್ಯಾಟರಿ 4520 ಎಂಎಎಚ್ ಇದ್ದು ದೀರ್ಘ ಕಾಲ ಫೋನ್ ಬಳಸುವುದಕ್ಕೆ ಸೂಕ್ತವಾಗಿದೆ. 8 ಜಿಬಿ ಮತ್ತು 128 ಮಾಡೆಲ್ಗೆ 29,999 ರೂ ಮತ್ತು 8 ಜಿಬಿ ಮತ್ತು 128 ಜಿಬಿ ಸ್ಟೋರೇಜ್ನ ಫೋನಿಗೆ 31,999 ರೂ. ಆಗಲಿದೆ ಎಂದು ಶಿಯೋಮಿ ಪ್ರಕಟಣೆ ತಿಳಿಸಿದೆ.
ಎಂ ಐ 11 ಎಕ್ಸ್ ಪ್ರೊ ವಿಶೇಷಗಳು
ಗಾತ್ರದಲ್ಲಿ 11ಎಕ್ಸ್ ನಷ್ಟೇ ಇದ್ದು – 6.67 ಇಂಚ್, ಡಿಸ್ಪ್ಲೇ, ಸೆಲ್ಫಿ ಕ್ಯಾಮೆರಾದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಬಹಳ ಮುಖ್ಯ ಬದಲಾವಣೆ ಎಂದರೆ ಇದರ ಚಿಪ್ಸೆಟ್. 11ಎಕ್ಸ್ ಪ್ರೊ ನಲ್ಲಿ ಸ್ನ್ಯಾಪ್ಡ್ರ್ಯಾಗನ್888 ಚಿಪ್ಸೆಟ್ ಇದು 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ನೊಂದಿಗೆ ಲಭ್ಯವಾಗುತ್ತಿದೆ.
ಇನ್ನು ಕ್ಯಾಮೆರಾದ ಸಾಮರ್ಥ್ಯವಂತು ಅದ್ಭುತ. ಹಿಂಬದಿಯಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾಇದೆ. ಇದಲ್ಲಿ ಸ್ಯಾಮ್ಸಂಗ್ ಎಚ್ಎಂ2 ಸೆನ್ಸಾರ್ ಇದೆ.
ಉಳಿದಂತೆ 11ಎಕ್ಸ್ನಂತೆಯೇ ಇರುವ ಪ್ರೊ ಮಾಡೆಲ್ 8 ಜಿಬಿ ರ್ಯಾಮ್ ಮತ್ತು 128 ಜಿ ಬಿ ಸ್ಟೋರೇಜ್ಗೆ 39,999 ರೂ. ಮತ್ತು 8 ಜಿಬಿ ಮತ್ತು 256 ಜಿಬಿ ಸ್ಟೋರೇಜ್ನ ಫೋನಿಗೆ 41,999 ರೂ. ಆಗಲಿದೆ ಎಂದು ಶಿಯೋಮಿ ಪ್ರಕಟಣೆ ತಿಳಿಸಿದೆ.
ಬಿಳಿ, ಕಪ್ಪು ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ನಾಳೆಯಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.