ಮತ್ತೆ ಭಾರತೀಯ ಸೇನೆ ಸೇರಿದ ಮಾರುತಿ ಸುಝುಕಿ ಜಿಪ್ಸಿ

ಎಂಥದ್ದೇ ರಸ್ತೆಗಳಲ್ಲೂ ಸಮರ್ಥವಾಗಿ ಚಲಿಸಬಲ್ಲ ವಾಹನವಾಗಿ ಜನಪ್ರಿಯವಾಗಿದ್ದ ಜಿಪ್ಸಿ ಸೇನೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಸುಧಾರಿತ ಆವೃತ್ತಿಯಾಗಿ ಈಗ ಈ ವಾಹನ ಮತ್ತೆ ಸೇನೆಗೆ ಸೇರ್ಪಡೆಯಾಗುತ್ತಿದೆ

ಈಗಾಗಲೇ ತಯಾರಿ ಸ್ಥಗಿತಗೊಳಿಸಿದ್ದ ಮಾರುತಿ ಸಜುಝುಕಿ ಜಿಪ್ಸಿ ವಿಶೇಷ ಆರ್ಡರಿನ ಕಾರಣ ಮಾರುನಮ ತಯಾರಿಸಲಾಗಿದೆ. ಪೊಲೀಸ್ ಹಾಗೂ ಸೇನಾ ವಲಯದಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದ ಜಿಪ್ಸಿಯದ್ದು ಎಂಥಾ ರಸ್ತಗಳಿಗೂ ಸೈ ಎನಿಸುವ ವಿನ್ಯಾಸ. ತಲೆಬಿಸಿಯಿಲ್ಲದ 1.3ಲೀ ಪೆಟ್ರೋಲ್ ಎಂಜಿನ್ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಫೋರ್ ವ್ಹೀಲ್ ಡ್ರೈವ್. 

ಹೈವೇಗೂ ಒಂದು ಹಂತಕ್ಕೆ ಒಗ್ಗುವ ಜಿಪ್ಸಿ ಗುಡ್ಡಗಾಡಿನ ರಸ್ತೆಗಳಿಗೆ, ಕಾಡಿನೊಳಗಿನ ಸಂಚಾರಕ್ಕೆ ಹಾಗೂ ಟ್ರೇಲರ್ ಹಾಕಿ ಎಳೆಯುವ ಕಾಯಕಗಳಿಗೆಲ್ಲ ಹೇಳಿ ಮಾಡಿಸಿದ್ದು. ಆದರೆ ಕಡಿಮೆ ಸಂಖ್ಯೆಯ ಮಾರಾಟದ ಕಾರಣ ಮತ್ತು ಹೊಸ ಸುರಕ್ಷತಾ ನಿಯಮಗಳು ಹಾಗೂ ಬಿಎಸ್ 6 ನಿಯಮಗಳು ಜಾರಿಗೆ ಬಂದದ್ದರಿದ ಜಿಪ್ಸಿ ಮಾರುಕಟ್ಟೆಯಿಂದ ನಿರ್ಗಮಿಸಿತ್ತು. ಇದೀಗ ಭಾರತೀಯ ಸೇನೆಯ ವಿಶೇಷ ಆರ್ಡರ್‌ಗಾಗಿ 700 ಜಿಪ್ಸಿಗಳನ್ನು ತಯಾರಿಸಿ ಜೂನ್ ತಿಂಗಳಲ್ಲಿ ಸರಬರಾಜು ಮಾಡಲಾಗಿದೆ. 

ಸೇನೆಯೂ ಈ ಮೊದಲು ಜಿಪ್ಸಿಗೆ ಬದಲಾಗಿ ಟಾಟಾ ಸಫಾರಿ ಸ್ಟಾರ್ಮ್‌ಗಳನ್ನು ಖರೀದಿಸಿತ್ತು. ಫೋರ್ ವೀಲ್ ಡ್ರೈವ್‌ನೊಂದಿಗೆ ಎಸಿಯೂ ಇರುವ ಕಾರಣ ಇದು ಜಿಪ್ಸಿಗೆ ಉತ್ತಮ ಪರ್ಯಾಯ ಎಂದುಕೊಳ್ಳಲಾಗಿತ್ತು. ಆದರೆ ಜಿಪ್ಸಿಯ ಸದ್ದು ಮಾಡದ ಪೆಟ್ರೋಲ್ ಎಂಜಿನ್, ಹಗುರ ಹಾಗೂ ಸಪೂರ ದೇಹ ತನ್ನದೇ ಆದ ಅನುಕೂಲತೆ ತರುತ್ತದೆ. ಹಾಗಾಗಿ ಜಿಪ್ಸಿಗೆ ಮರುಬೇಡಿಕೆ ಬಂದಿದೆ. 

ಹೊಸ ಜಿಪ್ಸಿಗಳು ಯಾವ ವಲಯಗಳಲ್ಲಿ ಕಾರ್ಯನಿರ್ವಹಿಸಲಿವೆ ಎಂಬ ವಿಚಾರವನ್ನು ಸೇನೆ ಬಹಿರಂಗಗೊಳಿಸಿಲ್ಲ. ಆದರೆ ಜಿಪ್ಸಿಯ ಅಗತ್ಯ ಹೆಚ್ಚಾಗಿ ಬರುವುದು ಗುಡ್ಡಗಾಡು ಗಡಿ ಪ್ರದೇಶಗಳಲ್ಲಿ. 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.