You should setup NX Bar properly

ಸೋರಿಕೆಯಾದ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯಲ್ಲಿ ಮಾರ್ಕ್‌ ಝುಕರ್‌ಬರ್ಗ್‌ ಫೋನ್‌ ನಂಬರ್!!

ಶನಿವಾರ ಫೇಸ್‌ಬುಕ್‌ನಿಂದ 50 ಕೋಟಿ ಬಳಕೆದಾರರ ಮಾಹಿತಿ ಸೋರಿಕೆಯಾದ ಸುದ್ದಿ ಹೊರಬಿತ್ತು. ಈ ಮಾಹಿತಿಯಲ್ಲಿ ಫೋನ್‌ ನಂಬರ್‌ಗಳೂ ಇದ್ದವು. ಈ ಫೋನ್‌ ನಂಬರ್‌ಗಳಲ್ಲಿ ಫೇಸ್‌ಬುಕ್‌ ಮಾಲೀಕರ ನಂಬರ್‌ ಕೂಡ ಸೋರಿಕೆಯಾಗಿದೆಯಂತೆ!

ಫೇಸ್‌ಬುಕ್‌ನಲ್ಲಿ ಬಳಕೆದಾರರ ಮಾಹಿತಿ ಸುರಕ್ಷಿತವಾಗಿಲ್ಲ ಎಂಬ ಕೂಗು ಕೇಳಿಯೇಬರುತ್ತಿದೆ. ಆದರೆ ಈ ಬಾರಿ ಸೋರಿಕೆಯಾಗಿದ್ದು ಬಹುಶಃ ಫೇಸ್‌ಬುಕ್‌ ಮಾಲೀಕ ಝುಕರ್‌ಬರ್ಗ್‌ ಅವರಿಗೂ ಮನವರಿಕೆಯಾಗಿದೆ ಎನಿಸುತ್ತದೆ. ಯಾಕೆಂದರೆ ಅವರ ಸೋರಿಕೆಯಾದ ನಂಬರ್‌ಗಳಲ್ಲಿ ಝುಕರ್‌ ಬರ್ಗ್‌ ಅವರ ನಂಬರ್‌ ಕೂಡ ಇದೆ ಎಂದು ತಿಳಿದು ಬಂದಿದೆ.

ಡೇವ್‌ ವಾಲ್ಕರ್‌ ಎಂಬ ಸೈಬರ್‌ ಸಂಶೋಧಕ, ಝುಕರ್‌ಬರ್ಗ್‌ ಹಾಗೂ ಫೇಸ್‌ಬುಕ್‌ ಸಹ ಸಂಸ್ಥಾಪಕ ಕ್ರಿಸ್‌ ಹ್ಯೂಸ್‌ ಮತ್ತು ಡಸ್ಟಿನ್‌ ಮಾಸ್ಕೊವಿಜ್‌ ಅವರ ಖಾಸಗಿ ಮಾಹಿತಿಯೂ ಸೋರಿಕೆಯಾಗಿದೆ ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಫೋನ್‌ನಂಬರ್‌ ಅಷ್ಟೇ ಅಲ್ಲ, ಅವರ ಲೋಕೇಶನ್‌ ಮಾಹಿತಿ, ಸ್ಥಳ, ಮದುವೆ ವಿವರಗಳು, ಜನ್ಮದಿನದ ಮಾಹಿತಿ ಸೋರಿಕೆಯಾಗಿದೆ.

ಹಡ್ಸನ್‌ರಾಕ್‌ನ ಸೈಬರ್‌ ಕ್ರೈಮ್‌ ಇಂಟೆಲಿಜೆನ್ಸ್‌ನ ಮುಖ್ಯತಂತ್ರಜ್ಞಾನ ಅಧಿಕಾರಿ ಅಲೋನ್‌ ಗಲ್‌ ಮೊದಲು ಈ ಸೋರಿಕೆ ಕುರಿತು ವರದಿ ಮಾಡಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: