ಅಮೆರಿಕದ ಕಾಂಗ್ರೆಸ್ ಎಲ್ಲ ದೈತ್ಯ ಟೆಕ್ ಕಂಪನಿಗಳ ಮಾಲೀಕರನ್ನು ಪಾಟೀ ಸವಾಲಿಗೆ ಕೂರಿಸಿದೆ. ಬುಧವಾರ ಫೇಸ್ಬುಕ್ ಮಾಲೀಕ ಮಾರ್ಕ್ ಝುಕರ್ಬರ್ಗ್ ಅವರಿಗೆ ಭಾರತೀಯ ಮೂಲದ ಪ್ರಮೀಳಾ ಜಯಪಾಲ್ ಹೇಗೆ ತರಾಟೆಗೆ ತೆಗೆದುಕೊಂಡಿದ್ದಾರೆ!

“ಮಾರ್ಕ್ ನೀವು ನಿಮ್ಮ ಪ್ರತಿಸ್ಪರ್ಧಿಗಳನ್ನು ನಕಲು ಮಾಡ್ತೀರಾ?“
ಅಮೆರಿಕನ್ ಕಾಂಗ್ರೆಸ್ ಸದಸ್ಯೆ, ಚೆನ್ನೈ ಮೂಲದವರಾದ ಪ್ರಮೀಳಾ ಜಯಪಾಲ್ ಬುಧವಾರ ಫೇಸ್ಬುಕ್ ಮಾಲೀಕ ಮಾರ್ಕ್ ಝುಕರ್ಬರ್ಗ್ ತಬ್ಬಿಬ್ಬು ಮಾಡಿದ್ದು ಹೀಗೆ.
ಬುಧವಾರ ಎಲ್ಲ ಟೆಕ್ ದೈತ್ಯ ಕಂಪನಿಗಳ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ ಹೌಸ್ ಆಫ್ ಕಾಂಗ್ರೆಸ್ ವಿಚಾರಣೆ ನಡೆಸಿತು. ಆರು ಗಂಟೆಗಳ ಕಾಲ ಈ ನಡೆದ ವಿಚಾರಣೆಯಲ್ಲಿ ಟೆಕ್ ಕಂಪನಿ ಮಾಲೀಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.
ಈ ವಿಚಾರಣೆಯಲ್ಲಿ ಫೇಸ್ಬುಕ್ ಮಾಲೀಕ ಝುಕರ್ಬರ್ಗ್ ತಬ್ಬಿಬ್ಬಾಗಿ ಹೋದರು. ವಿಚಾರಣಾ ಸಮಿತಿಯಲ್ಲಿದ್ದ ಪ್ರಮೀಳಾ ಜಯಪಾಲ್, ಪ್ರತಿಸ್ಪರ್ಧಿಗಳೊಂದಿಗೆ ಇರುವ ಅನೈತಿಕ ಸ್ಪರ್ಧೆಯನ್ನು ಪ್ರಶ್ನಿಸಿದರು.
ಪ್ರತಿಸ್ಪರ್ಧಿಗಳ ಉತ್ಪನ್ನಗಳನ್ನು ನಕಲು ಮಾಡುವುದು ಅಥವಾ ಸೇವೆ ಅಥವಾ ಉತ್ಪನ್ನವನ್ನು ಮಾರಾಟ ಮಾಡುವಂತೆ ಒತ್ತಡ ತರುವುದು ಮಾಡುತ್ತದೆ ಎಂಬ ಆರೋಪವನ್ನು ಝುಕರ್ಬರ್ಗ್ ಮುಂದಿಟ್ಟರು.
ಪ್ರತಿ ಸ್ಪರ್ಧಿಗಳು ನೀಡುವ ಫೀಚರ್ಗಳನ್ನು ನಕಲು ಮಾಡಿದ್ದಾಗಿ ಒಪ್ಪಿಕೊಂಡ ಝುಕರ್ಬರ್ಗ್, ಇತರರು ನಮ್ಮ ಫೀಚರ್ಗಳನ್ನು ನಕಲು ಮಾಡಿದ್ದಾರೆ ಎಂದು ಸಮರ್ಥನೆ ನೀಡಿದರು.
ಇನ್ಸ್ಟಾಗ್ರಾಮ್ ಕೊಳ್ಳುವುದಕ್ಕೂ ಮೊದಲು ಫೇಸ್ಬುಕ್ ಫೇಸ್ಬುಕ್ ಕ್ಯಾಮೆರಾ ಆರಂಭಿಸಲು ಹೊರಟಿದ್ದನ್ನು ಪ್ರಮೀಳಾ ಉಲ್ಲೇಖಿಸಿದರು.
ವಿಚಾರಣೆಯ ವಿಡಿಯೋ ತುಣುಕು ಇಲ್ಲಿದೆ ನೋಡಿ:
ಯಾರೂ ಈ ಪ್ರಮೀಳಾ ಜಯಪಾಲ್?

ಚೆನ್ನೈನಲ್ಲಿ ಜನಿಸಿದ ಪ್ರಮೀಳಾ ಅವರು ಈಗ ಅಮೆರಿಕದ ವಾಷಿಂಗ್ಟನ್ನಲ್ಲಿ ನೆಲೆಸಿದ್ದಾರೆ. ಡೆಮೊಕ್ರಟಿಕ್ ಪಕ್ಷದ ಸದಸ್ಯೆಯಾದ ಇವರು ಕಳೆದ ಒಂದು ದಶಕದಿಂದ ಅಮೆರಿಕದಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟೀವ್ ಆಯ್ಕೆಯಾದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆ ಇವರಿಗೆ. ನಾಗರಿಕ ಹಕ್ಕುಗಳ ಕಾರ್ಯಕರ್ತೆಯಾಗಿ ಹೋರಾಟದಲ್ಲಿ ಸಕ್ರಿಯರಾಗಿದ್ದ ಪ್ರಮೀಳಾ ಪ್ರಸ್ತುತ ಹೌಸ್ ಅಫ್ ರೆಪ್ರೆಸೆಂಟಿಟಿವ್ನಲ್ಲಿ ವಾಷಿಂಗ್ಟನ್ ಅನ್ನು ಪ್ರತಿನಿಧಿಸುತ್ತಾರೆ.