ಕರೋನಾದಿಂದಾಗಿ ಯುಎಇ ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಗಳನ್ನು ಆನ್ಲೈನಿನಲ್ಲಿ ನೋಡಲು ಜಿಯೋ ಹೊಸ ಆಫರ್ ವೊಂದನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಡಿಸ್ನಿ + ಹಾಟ್ಸ್ಟಾರ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಹೊಸದಾಗಿ ಪ್ಲಾನ್ಗಳನ್ನು ಲಾಂಚ್ ಮಾಡಿದೆ.
ರೂ.401ಕ್ಕೆ ರಿಚಾರ್ಜ್ ಮಾಡಿಸಿಕೊಂಡರೆ ರೂ.399 ಮೌಲ್ಯದ ಡಿಸ್ನಿ + ಹಾಟ್ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತುಒಂದು ತಿಂಗಳ ಅವಧಿಯಲ್ಲಿ ಬಳಕೆ ಮಾಡಿಲು 90 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ಆನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಜಿಯೋ ಆಪ್ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವು ಇರಲಿದೆ.
ರೂ. 499ಕ್ಕೆ ರಿಚಾರ್ಜ್ ಮಾಡಿಸಿಕೊಂಡರೆ ಡಿಸ್ನಿ + ಹಾಟ್ಸ್ಟಾರ್ VIP ಚಂದದಾರಿಕೆ ಜೊತೆ 56 ದಿನಗಳ ಕಾಲ ನಿತ್ಯ 1.5GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ಸಿಗಲಿದೆ. ರೂ.777ಕ್ಕೆ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ 84 ದಿನಗಳ ಕಾಲ ಬಳಕೆಗೆ 131 GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡುವುದರೊಂದಿಗೆ ಆನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಜಿಯೋ ಆಪ್ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶ ನೀಡಲಿದೆ.
ರೂ.2599 ರಿಚಾರ್ಜ್ ಮಾಡಿಸಿಕೊಂಡವರಿಗೆ ಜಿಯೋ ಡಿಸ್ನಿ + ಹಾಟ್ಸ್ಟಾರ್ VIP ಚಂದದಾರಿಕೆ ಯೊಂದಿಗೆ ಒಂದು ವರ್ಷದ ಅವಧಿಗೆ 740 GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡುವುದರೊಂದಿಗೆ ಆನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಜಿಯೋ ಆಪ್ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಿದೆ.