ಜಾಗತಿಕ ವಿಜ್ಞಾನ -ತಂತ್ರಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾದ ಜ್ಞಾನ ಲೋಕದ ಹೊಸ ಸಂಶೋಧನೆ, ಅಧ್ಯಯನ ಹಾಗೂ ಕುತೂಹಲಕರ ಸಂಗತಿಗಳನ್ನು ವಿವರಿಸುವ ಧ್ವನಿ ಸರಣಿ
- ನಿರ್ಮಾಣ: ಕೊಳ್ಳೆಗಾಲ ಶರ್ಮ, ಹಿರಿಯ ವಿಜ್ಞಾನಿ ಹಾಗೂ ಲೇಖಕರು | ಜಾಣಧ್ವನಿ: ಕ್ಷಮಾ. ವಿ. ಭಾನುಪ್ರಕಾಶ್
ಆಗಸ್ಟ್ 25ರಂದು ಜರ್ಮನಿಯ ಜೀವ ರಸಾಯನಶಾಸ್ತ್ರಜ್ಞ ಹ್ಯಾನ್ಸ್ ಕ್ರೆಬ್ ಅವರ ಜನ್ಮದಿನ. ನಮಗೆಲ್ಲರಿಗೂ ಕಾರ್ಬೊಹೈಡ್ರೇಟುಗಳು ನಿರ್ದಿಷ್ಟ ಕ್ರಿಯಾಸರಣಿಯನ್ನು ಅನುಸರಿಸಿ ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿ ಮಾಡುವುದು ತಿಳಿದಿತ್ತು. ಲ್ಯಾಕ್ಟಿಕ್ ಆಮ್ಲ ಉತ್ಕರ್ಷಣೆ ಹೊಂದಿ ಅಂತಿಮವಾಗಿ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು ಉತ್ಪತ್ತಿ ಮಾಡುವುದು ಹೇಗೆ ಎಂಬುದು ಗೊತ್ತಿರಲಿಲ್ಲ. ಕ್ರೆಬ್ಸ್ ಇದನ್ನು ಪತ್ತೆ ಮಾಡಿದ. ಈ ಕ್ರಿಯಾ ಸರಣಿಯೂ ಒಂದು ಚಕ್ರೀಯ ಪಥದಲ್ಲಿ ನಡೆಯುವುದರಿಂದ ಮತ್ತು ಈ ಚಕ್ರದಲ್ಲಿ ಸಿಟ್ರಿಕ್ ಆಮ್ಲ ಒಂದು ಮುಖ್ಯ ಹಂತವಾದುದರಿಂದ ಈ ಚಕ್ರೀಯ ಕ್ರಿಯಾ ಸರಣಿಗೆ ಸಿಟ್ರಿಕ್ ಆಮ್ಲ ಚಕ್ರ ಅಥವಾ ಕ್ರೆಬ್ಸ್ ಚಕ್ರ ಎಂದು ಹೆಸರು ಬಂದಿದೆ. ದೇಹದಲ್ಲಿ ಶಕ್ತಿ ಉತ್ಪಾದನೆಯ ಪ್ರಮುಖ ಹಂತವೆಂದು ಈಗ ಸ್ಥಿರಪಟ್ಟಿರುವ ಈ ಸಿಟ್ರಿಕ್ ಆಮ್ಮ ಚಕ್ರವನ್ನು ಕಂಡುಹಿಡಿದುದಕ್ಕಾಗಿಯೇ ಕ್ರೆಬ್ಸ್ನಿಗೆ ನೊಬೆಲ್ ಬಹುಮಾನದ ಒಂದು ಪಾಲು ದೊರೆತದ್ದು. ಕ್ರೆಬ್ಸ್ ಚಕ್ರದ ವಿಶದೀಕರಣಕ್ಕೆ ನೆರವಾಗುವ ಅಮೂಲ್ಯ ಸಂಶೋಧನೆಗಳನು ನಡೆಸಿದ ಲಿಪ್ಮನ್ ಆ ಬಹುಮಾನದ ಉಳಿದೊಂದು ಪಾಲನ್ನು ಪಡೆದ.
It’s very welcome move to adopt scientific temper and critical thinking and reasoning to keep growing and developing perpetually.
Update or perish as they say.
That too coming in Kannada is very pleasant experience and glad you are doing it.
Dr Thippeswamy