ನೀವು ಫೇಸ್‌ಬುಕ್‌-Instaದಲ್ಲಿ ಏನು ಮಾಡುತ್ತಿದ್ದೀರಾ ಅಂತ ಗೂಗಲ್‌ ನೋಡುತ್ತಿದೆ! ಯಾಕೆ ಗೊತ್ತಾ?

ಈ ಹಿಂದೆಯೂ ಬಳಕೆದಾರರ ಮಾಹಿತಿಯನ್ನು ಗೂಗಲ್ ಸಂಗ್ರಹಿಸುತ್ತಿದೆ ಎನ್ನುವ ಮಾತು ಕೇಳಿ ಬಂದಿತ್ತು. ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡಬೇಕು ಮತ್ತು ಜಾಹೀರಾತುಗಳನ್ನು ವೈಯಕ್ತಿಕ ಆಸಕ್ತಿಗಳಿಗೆ ಸಂಬಂಧಿಸಿದಂತೆ ನೀಡಬೇಕು ಎನ್ನುವ ಕಾರಣಕ್ಕೆ ನಾವು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಅವುಗಳನ್ನು ಸಂಪೂರ್ಣ ಸುರಕ್ಷಿತವಾಗಿ ಇರಿಸುತ್ತವೇ ಎಂದು ಗೂಗಲ್ ತಿಳಿಸಿತ್ತು.

ಆದರೆ ಈಗ ಮತ್ತೊಂದ್ದು ಹಂತಕ್ಕೆ ಹೋಗಿರುವ ಗೂಗಲ್ ನಮ್ಮ ಫೋನಿನ ಆಕ್ಟೀವಿಟಿಗಳ ಮೇಲೆಯೂ ಕಣ್ಣಿದೆ ಎನ್ನುವ ಸತ್ಯ ಬಯಲಾಗಿದೆ.

ತನ್ನ ಆಪ್‌ ಸೇವೆಗಳನ್ನು ಬಳಕೆಯ ಡೇಟಾವನ್ನು ಮಾತ್ರವೇ ಸಂಗ್ರಹಿಸದೇ, ಆಂಡ್ರಾಯ್ಡ್‌ ಫೋನಿನಲ್ಲಿ ನಾವು ಯಾವ ಆಪ್‌ಗಳನ್ನು ಬಳಕೆ ಮಾಡುತ್ತಿದ್ದೇವೆ, ಆಪ್‌ಗಳಲ್ಲಿ ನಮ್ಮ ಚಟುವಟಿಕೆ ಹೇಗಿದೆ ಎಂಬುದನ್ನು ಗೂಗಲ್ ಟ್ರಾಕ್ ಮಾಡುತ್ತಿದೆ ಮತ್ತು ಅದನ್ನು ತನ್ನ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿದೆ.

ಇದನ್ನು ಓದಿ: ನೀವು ಡ್ರೋನ್ ಮಾಡ್ಕೋಬಹುದು..! ಅದೇನು ದೊಡ್ಡ ವಿಷಯವೇ ಅಲ್ಲ..!

ಸದ್ಯ ದೊರೆತಿರುವ ವರದಿಯೊಂದರ ಪ್ರಕಾರ, ಸರ್ಚ್ ಎಂಜಿನ್ ದೈತ್ಯ ಗೂಗಲ್‌ ತನ್ನ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಅಲ್ಲದ ಅಪ್ಲಿಕೇಶನ್‌ಗಳೊಂದಿಗೆ ಅಂದರೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಂತಹ ಜನಪ್ರಿಯ ಅಪ್ಲಿಕೇಶನ್‌ಗಳೊಂದಿಗೆ ಹೇಗೆ ಸಂವಹನ ನಡೆಸುತ್ತದೆ ಎಂಬುದರ ಕುರಿತು ಡೇಟಾವನ್ನು ಪ್ರವೇಶಿಸಲು “ಆಂಡ್ರಾಯ್ಡ್ ಲಾಕ್‌ಬಾಕ್ಸ್” ಎಂದು ಕರೆಯಲ್ಪಡುವ ಆಂತರಿಕ ಪ್ರೋಗ್ರಾಂ ಅನ್ನು ಬಳಸುತ್ತಿದೆ ಎನ್ನಲಾಗಿದೆ.

ಗೂಗಲ್ ಮೊಬೈಲ್ ಸೇವೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿರುವ ರಹಸ್ಯ ಪ್ರೋಗ್ರಾಂ, ಬಳಕೆದಾರರು ನಿರ್ದಿಷ್ಟ ಅಪ್ಲಿಕೇಶನ್‌ ಗಳನ್ನು ಎಷ್ಟು ಬಾರಿ ಬಳಕೆ ಮಾಡುತ್ತಾರೆ ಮತ್ತು ಅವರು ಎಷ್ಟು ಸಮಯದವರೆಗೆ ಬಳಸುತ್ತಾರೆ ಎಂಬುದನ್ನು ನೋಡಲು ಗೂಗಲ್‌ನ ಉದ್ಯೋಗಿಗಳಿಗೆ ಅನುಮತಿಸುತ್ತದೆ ಎನ್ನಲಾಗಿದೆ.

ಕೆಲವು ಸಂದರ್ಭಗಳಲ್ಲಿ ಈ ಡೇಟಾವನ್ನು ನೋಡಲು ಗೂಗಲ್ ಉದ್ಯೋಗಿಗಳು ಅನುಮತಿ ಕೋರಬೇಕಾಗುತ್ತದೆ ಮತ್ತು ಈ ವಿನಂತಿಗಳನ್ನು ಕೆಲವೊಮ್ಮೆ ನಿರಾಕರಿಸಲಾಗುತ್ತದೆ ಎಂದು ವರದಿ ಹೇಳುತ್ತದೆ.

ಆಂಡ್ರಾಯ್ಡ್ ಸೆಟಪ್ ಪ್ರಕ್ರಿಯೆಯ ಭಾಗವಾಗಿ ಮಾಹಿತಿಯನ್ನು ಹಂಚಿಕೊಳ್ಳಲು ಗೂಗಲ್ ಬಳಕೆದಾರರು ಒಪ್ಪಿದ ನಂತರ “ಆಂಡ್ರಾಯ್ಡ್ ಲಾಕ್‌ಬಾಕ್ಸ್” ಕಾರ್ಯನಿರ್ವಹಿಸುತ್ತದೆ.

ಈ ಡೇಟಾವು ಹೆಚ್ಚು ವೈಯಕ್ತಿಕಗೊಳಿಸಿದ ಅನುಭವವನ್ನು ನೀಡಲು ಗೂಗಲ್‌ ಗೆ ಅನುಮತಿಸುತ್ತದೆ ಎಂದು ಬಳಕೆದಾರರಿಗೆ ತಿಳಿಸಲಾಗುತ್ತದೆ. ಪ್ರತಿಸ್ಪರ್ಧಿ ಅಪ್ಲಿಕೇಶನ್‌ಗಳಿಂದ ಬಳಕೆಯ ಡೇಟಾಗೆ ಪ್ರವೇಶವನ್ನು ಹೊಂದಿದೆ ಎಂದು ಕಂಪನಿ ಈ ಹಿಂದೆಯೂ ಒಪ್ಪಿಕೊಂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: