ಏಕಾಏಕಿ ಗೂಗಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಜಾಗತಿಕವಾಗಿ ಕಾಣಿಸಿಕೊಂಡಿರುವ ಸಮಸ್ಯೆಯಿಂದಾಗಿ ಬಳಕೆದಾರರು ಸಾಕಷ್ಟು ಅನನುಕೂಲ ಅನುಭವಿಸಿದ್ದು ವರದಿಯಾಗುತ್ತಿದೆ.

ಗೂಗಲ್ ಸರ್ಚ್ ಎಂಜಿನ್ ಹೊರತು ಪಡಿಸಿ ಗೂಗಲ್ನ ಎಲ್ಲ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಬಳಕೆದಾರರು ಗೂಗಲ್ನ ಯಾವುದೇ ಸೇವೆಗಳನ್ನು ಬಳಸಿದಾಗ ‘ಸರ್ವರ್ ಎರರ್’ ಎಂಬ ಸಂದೇಶ ಲಭ್ಯವಾಗುತ್ತಿದೆ.
ಗೂಗಲ್ ಡ್ರೈವರ್, ಜಿಮೇಲ್, ಆಂಡ್ರಾಯ್ಡ್ ಪ್ಲೇ ಸ್ಟೋರ್, ಮ್ಯಾಪ್, ಡಾಕ್ಸ್, ಸೇರಿದಂತೆ ಹಲವು ಸೇವೆಗಳಿಗೆ ಗ್ರಾಹಕರು ಅವಲಂಬಿತರಾಗಿದ್ದು, ಗೂಗಲ್ ಸರ್ವರ್ಗಳಲ್ಲಿ ಕಾಣಿಸಿಕೊಂಡ ಲೋಪದಿಂದಾಗಿ ಜಾಗತಿಕವಾಗಿ ಬಳಕೆದಾರರು ಅನನುಕೂಲವನ್ನು ಎದುರಿಸುತ್ತಿದ್ದಾರೆ.

ಕಳೆದ ಎರಡು ಗಂಟೆಗಳಲ್ಲಿ 6000 ಸಾವಿರಕ್ಕೂ ಹೆಚ್ಚು ದೂರುಗಳು ಗೂಗಲ್ಗೆ ತಲುಪಿದ್ದು, ಇದುವರೆಗೂ ಗೂಗಲ್ನಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.
ಡೌನ್ಟ್ರ್ಯಾಕರ್ರ ಪ್ರಕಾರ ಕಳೆದ ತಿಂಗಳ ನವೆಂಬರ್ನಲ್ಲೂ ಗೂಗಲ್ ಸರ್ವರ್ಗಳಲ್ಲಿ ಲೋಪಕಾಣಿಸಿಕೊಂಡು, ಸೇವೆಯಲ್ಲಿ ವ್ಯತ್ಯಾಸ ಉಂಟಾಗಿತ್ತು. ಆದರೆ ಈ ಬಾರಿ ಜಾಗತಿಕವಾಗಿ ಸಮಸ್ಯೆ ತಲೆದೋರಿದೆ.

ಹ್ಯಾಕ್ ಆದ ನಂತರ ಅನೇಕರು ಟ್ವಿಟರ್ ನಲ್ಲಿ ತಮ್ಮ ಆಕ್ರೋಶ, ಅಸಹಾಯಕತೆಯನ್ನು ಹೊರಹಾಕಿದ್ದಾರೆ.
Treasury hacked.
— Sven Henrich (@NorthmanTrader) December 14, 2020
Google down.
Futures up. https://t.co/LAuVuS9qCf
Google down under the weight of people googling who the fuck their Europa League opponent is.
— Rhys James (@rhysjamesy) December 14, 2020
Just got locked out of my g-suite account of my entire business. Login screen is basically telling me it doesn't recognise the address. @gmail @Google What to do now? #nightmares
— Jorg van der Ham (@jlvdh) December 14, 2020