ದಿನಕ್ಕೊಂದು ಆ್ಯಪ್‌ | ನಿಮ್ಮ ಮೊಬೈಲ್‌ನಲ್ಲೇ ಫೋಟೋ ಬಳಸಿ ವಿಡಿಯೋ ಮಾಡಿ

ಈಗಿನ ಸ್ಮಾರ್ಟ್‌ಫೋನ್‌ಗಳು ಫೋಟೋ, ವಿಡಿಯೋಗಳನ್ನು ಅದ್ಭುತವಾಗಿ ಸೆರೆ ಹಿಡಿಯುತ್ತವೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಸೆರೆಹಿಡಿದ ಸ್ಥಿರ ಚಿತ್ರಗಳನ್ನು ವಿಡಿಯೋ ಆಗಿ ನೋಡಬೇಕೆನಿಸುತ್ತದೆ. ಸ್ಥಿರ ಚಿತ್ರಗಳಿಗೆ ಚಲನೆಯ ಸ್ಪರ್ಶ ನೀಡಲು ಈ ಆ್ಯಪ್‌ ಬಳಸಬಹುದು. ವಿಡಿಯೋ ಎಡಿಂಟಿಂಗ್‌ ತಿಳಿಯದವರು ಬಳಸಬಹುದು

ವಿಡಿಯೋ ಎಡಿಟಿಂಗ್‌ ಸ್ವಲ್ಪ ಕಷ್ಟದ ಕೆಲಸ. ಅದರಲ್ಲೂ ಪುಟ್ಟ ಮೊಬೈಲ್‌ ಪರದೆಯ ಮೇಲೆ ವಿಡಿಯೋ ಎಡಿಟ್‌ ಮಾಡುವುದು ಪರಿಣಿತರಿಗೆ ಮಾತ್ರ ಸಾಧ್ಯ. ಆದರೆ ನಿಮ್ಮ ಬಳಿ ಇರುವ ಫೋಟೋಗಳನ್ನು ವಿಡಿಯೋ ಆಗಿ ಪರಿವರ್ತಿಸುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಸ್ಪ್ಲೈಸ್‌ ನಿಮ್ಮ ಫೋಟೋಗಳನ್ನು ವಿಡಿಯೋ ಆಗಿ ರೂಪಾಂತರಿಸಲು ಹೇಳಿ ಮಾಡಿಸಿದ ಆ್ಯಪ್‌!

ಮೂರೇ ಹಂತಗಳಲ್ಲಿ ನಿಮ್ಮ ಫೋಟೋಗಳನ್ನು ಬಳಸಿ ವಿಡಿಯೋ ಸೃಷ್ಟಿಸಬಹುದು. ಆ್ಯಪ್‌ ತೆರೆದುಕೊಂಡಾಗ + ಐಕಾನ್‌ ಮೇಲೆ ಕ್ಲಿಕ್‌ ಮಾಡಿ, ಡ್ರಾಪ್‌ಬಾಕ್ಸ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌, ಗೂಗಲ್‌ ಡ್ರೈವ್‌ ಅಥವಾ ಕ್ಯಾಮೆರಾ ರೋಲ್‌ನಿಂದ ಫೋಟೋಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ನಂತರದ ಆ್ಯಪ್‌ನಲ್ಲೇ ಇರುವ ಮ್ಯೂಸಿಕ್‌ ಲೈಬ್ರರಿಯಿಂದ ಹಿನ್ನೆಲೆಗೆ ಬೇಕಾದ ಸಂಗೀದ ತುಣುಕನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲವಾದರೆ, ನಿಮ್ಮ ಮೊಬೈಲ್‌ನಲ್ಲಿರುವ ನಿಮ್ಮಿಷ್ಟದ ಸಂಗೀತವನ್ನು ಆಯ್ಕೆ ಮಾಡಿಕೊಳ್ಳಬಹುದು.

ಇಷ್ಟಾದ ಮೇಲೆ ವಿಡಿಯೋ ಯಾವ ರೂಪದಲ್ಲಿರಬೇಕು? ಟ್ರಾನ್ಸಿಷನ್‌ ಏನಿರಬೇಕು? ವಿಡಿಯೋಕ್ಕೆ ಏನು ಹೆಸರು ನೀಡಬೇಕು? ಎಂಬುದನ್ನು ನಿರ್ಧರಿಸಿದರೆ ನಿಮ್ಮ ಫೋಟೋಗಳು ವಿಡಿಯೋ ರೂಪದಲ್ಲಿ ಹೊರಬರುವುದಕ್ಕೆ ಸಿದ್ಧವಾದಂತೆಯೇ.

ಇದು ಐಫೋನ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಉಚಿತವೂ ಹೌದು. ನೀವು ಅದನ್ನು ಇಲ್ಲಿ ಕ್ಲಿಕ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು | ಡೌನ್‌ಲೋಡ್‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: