ಕೊರೊನಾ ಸೋಂಕು, ಲಾಕ್ಡೌನ್ನಿಂದಾಗಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದೇ ಇದೆ. ಹಾಗಾಗಿ ಮನೆಯಲ್ಲೇ ದೈಹಿಕ ಚಟುವಟಿಕೆಗಳನ್ನು ಮಾಡುವುದಕ್ಕೆ ಒಂದು ಸುಲಭ ಗೈಡ್ ಇಲ್ಲಿದೆ

ಜಿಮ್ಗೆ ಹೋಗುವುದಿರಲಿ, ಕನಿಷ್ಠ ವಾಕ್ ಹೋಗುವುದಕ್ಕೂ ಆತಂಕ ಪಡುವ ಕಾಲವಿದು. ಹಾಗೆಂದು ದೈಹಿಕ ಚಟುವಟಿಕೆಗಳನ್ನು ಇಲ್ಲದೇ ಹೋದರೆ ಆರೋಗ್ಯದ ಸಮತೋಲನವೂ ಏರುಪೇರಾಗುತ್ತದೆ. ಹಾಗಾಗಿ ದೈಹಿಕ ಚಟುವಟಿಕೆಗಳು, ವ್ಯಾಯಾಮ ಅತ್ಯಗತ್ಯ.
ಏನು ಮಾಡಬೇಕೆಂದು ಯೋಚಿಸುತ್ತಿರುವಿರಾ? ಹೋಮ್ ವರ್ಕೌಟ್ ಆ್ಯಪ್ ನಿಮಗೆ ನೆರವಾಗುತ್ತದೆ. ಜಿಮ್ನಲ್ಲಿ ಮಾಡುವ ಎಲ್ಲ ದೈಹಿಕ ವ್ಯಾಯಾಮಗಳನ್ನು ಮನೆಯಲ್ಲೇ ಮಾಡುವುದಕ್ಕೆ ಈ ಆ್ಯಪ್ ನೆರವಾಗುತ್ತದೆ.
ಇದೇ ಮೊದಲ ಬಾರಿ ಆರಂಭಿಸುತ್ತಿರುವವರಿಂದ ಹಿಡಿದು ಈಗಾಗಲೇ ಅಭ್ಯಾಸ ಮಾಡುತ್ತಿರುವವರೆಗೆ ವಿವಿಧ ಅವಧಿ, ವಿವಿಧ ಚಟುವಟಿಕೆಗಳನ್ನು ಅಗತ್ಯ ತಕ್ಕಂತೆ ಸಮಯ ನಿಗದಿಗೊಳಿಸಿ, ವ್ಯಾಯಾಮಗಳನ್ನು ಸೂಚಿಸುತ್ತದೆ.
ಇಡೀ ದೇಹದ ವ್ಯಾಯಾಮ, ಎದೆ ಭಾಗದ ವ್ಯಾಯಾಮ, ಕಾಲುಗಳು, ಕೈಗಳು, ತೋಳು ಹೀಗೆ ಹಲವು ವಿಧದ ವ್ಯಾಯಾಮಗಳಿವೆ. ಜೊತೆಗೆ ಕ್ವಾರಂಟೈನ್ ಕಾಲದ 5 ಅತ್ಯುತ್ತಮ ವ್ಯಾಯಾಮಗಳನ್ನು ಈ ಆ್ಯಪ್ ಸೂಚಿಸುತ್ತದೆ ಮತ್ತು ವ್ಯಾಯಾಮ ಮಾಡುವಾಗ ಮಾರ್ಗದರ್ಶನ ನೀಡುತ್ತದೆ.

ಅನುಭವಿಗಳು ತಮ್ಮ ವ್ಯಾಯಾಮ ವಿಧಾನವನ್ನು ಬೇಕಾದಂತೆ ಬದಲಿಸಿಕೊಳ್ಳುವುದಕ್ಕೂ ಅವಕಾಶವಿದೆ. ಹೊಸಬರಿಗೆ ವ್ಯಾಯಾಮವನ್ನು ಕಲಿಸಿಕೊಡುವ ಆನಿಮೇಟೆಡ್ ಗೈಡ್ ಕೂಡ ಇದರಲ್ಲಿದೆ.
ನೀವು ಶ್ರದ್ಧೆಯಿಂದ ನಿತ್ಯ ವ್ಯಾಯಾಮ ಮಾಡಿದರೆ ದೇಹದ ತೂಕದಲ್ಲಾಗುವ ಬದಲಾವಣೆಯ ಮೇಲೂ ಕಣ್ಣಿಸುವುದಕ್ಕೆ ಇದರಲ್ಲಿ ಟ್ರ್ಯಾಕರ್ ಇದೆ.
ಆಂಡ್ರಾಯ್ಡ್ ಫೋನ್ಗಳಿಗೆ ಮಾತ್ರ ಹೋಮ್ ವರ್ಕೌಟ್ ಆ್ಯಪ್ ಲಭ್ಯವಿದೆ. ಇಲ್ಲಿ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ | ಡೌನ್ಲೋಡ್