ಎಲ್ಲವೂ ಆನ್ಲೈನ್ ಆಗುತ್ತಿರುವ ಕಾಲದಲ್ಲಿ ಶಿಕ್ಷಣ ಕ್ಷೇತ್ರವೂ ಡಿಜಿಟಲ್ ರೂಪಾಂತರ ಪಡೆದುಕೊಳ್ಳುತ್ತಿದೆ. ಕೇವಲ ಆದ್ಯತೆ ಮತ್ತು ಸಾಮರ್ಥ್ಯದ ಲೆಕ್ಕಾಚಾರವಾಗಿದ್ದ ಆನ್ಲೈನ್ ಶಿಕ್ಷಣ ಅನಿವಾರ್ಯವಾಗುತ್ತಿದೆ. ಇದನ್ನು ಇನ್ನಷ್ಟು ಸರಳವಾಗಿಸುವ ನಿಟ್ಟಿನಲ್ಲಿ ಏರ್ಟೆಲ್ ಹೊಸ ಪ್ರಯೋಗಕ್ಕೆ ಮುಂದಾಗಿದೆ

ಭಾರ್ತಿ ಏರ್ಟೆಲ್ ಮತ್ತು ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ ಜಂಟಿಯಾಗಿ ಏರ್ಟೆಲ್ ಡಿಟಿಎಚ್ ಮೂಲಕ ಭಾರತ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲು ಆಕಾಶ ಎಜುಟಿವಿಯನ್ನು ತರುತ್ತಿದೆ.
ಜೆಇಇ/ಎನ್ಇಇಟಿ ಪರೀಕ್ಷೆ ಬರೆಯಲು ಇಚ್ಚಿಸಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕೋಚಿಂಗ್ ಅನ್ನು ಡಿಟಿಎಚ್ ಮೂಲಕ ನೀಡಲಿದೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಆನ್ಲೈನ್ ತರಗತಿಗಳು ಸಾಮಾನ್ಯವಾಗಿವೆ. ಆದರೆ ಇಂಟರ್ನೆಟ್ ಲಭ್ಯತೆ, ಕೋಚಿಂಗ್ ತರಗತಿಗಳನ್ನು ಪಡೆದುಕೊಳ್ಳಲು ಬೇಕಾದ ಆರ್ಥಿಕತೆ ಎಲ್ಲದರ ಹಿನ್ನೆಲೆಯಲ್ಲಿ ಮನೆಗೆ ಮನೆಗೆ ಸುಲಭವಾಗಿ ತಲುಪಿಸುವ ಹಿನ್ನೆಲೆಯಲ್ಲಿ ಏರ್ಟೆಲ್ ಈ ಹೆಜ್ಜೆ ಇರಿಸಿದೆ.
ಭಾರತದಲ್ಲಿ 1.7 ಕೋಟಿ ಡಿಟಿಎಚ್ ಗ್ರಾಹಕರಿದ್ದು, ಸುಲಭದ ದರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ತಡೆಯಲು ಸಾಧ್ಯವಿದೆ ಎಂದು ಭಾರ್ತಿ ಏರ್ಟೆಲ್ ನಿರ್ದೇಶಕ ಸುನೀಲ್ ತಲ್ದಾರ್ ಹೇಳಿದ್ದಾರೆ. ತಿಂಗಳಿಗೆ 247 ರೂ.ಗಳಿಗೆ ಚಾನೆಲ್ ಲಭ್ಯವಿದೆ ಎಂದೂ ತಿಳಿಸಿದ್ದಾರೆ.