You should setup NX Bar properly

ಫೇಸ್‌ಬುಕ್‌ ಡಾಟಾ ಲೀಕ್‌ ; ಭಾರತದ 60 ಲಕ್ಷ ಬಳಕೆದಾರರ ಫೋನ್‌ ನಂಬರ್‌ ಸೋರಿಕೆ !

ಮತ್ತೊಂದು ಡಾಟಾ ಲೀಕ್‌ ಆಗಿದೆ. ಜಗತ್ತಿನ ಅತಿ ದೊಡ್ಡ ಸೋಷಿಯಲ್‌ ಮೀಡಿಯಾ ಎನಿಸಿಕೊಂಡ ಫೇಸ್‌ಬುಕ್‌ನಿಂದ ಭಾರತವೂ ಸೇರಿದಂತೆ 106 ದೇಶಗಳ 53 ಕೋಟಿ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ

ಫೇಸ್‌ಬುಕ್ ಮತ್ತೆ ಮುಜುಗರ ಎದುರಿಸುವಂತಾಗಿದೆ. ಫೇಸ್‌ಬುಕ್‌ನ 103 ದೇಶಗಳ 53.3 ಕೋಟಿ ಬಳಕೆದಾರರ ಖಾಸಗಿ ಮಾಹಿತಿ ಮತ್ತು ಫೋನ್‌ ನಂಬರ್‌ಗಳು ಸೋರಿಕೆಯಾಗಿದ್ದು, ಡಾರ್ಕ್‌ ನೆಟ್‌ನಲ್ಲಿ ಮಾರಾಟವಾಗುತ್ತಿರುವ ಅಂಶಗಳ ಬಯಲಾಗಿದೆ.

ಅಮೆರಿಕದ ಹಡ್ಸನ್‌ ರಾಕ್‌ ಮೂಲದ ಸೈಬರ್‌ ಕ್ರೈಮ್‌ ಗುಪ್ತಚರ ಸಂಸ್ಥೆ ಈ ಸಂಗತಿಯನ್ನು ಬಯಲು ಮಾಡಿದ್ದು, ಭಾರತದ 60 ಬಳಕೆದಾರರ ಮಾಹಿತಿಯೂ ಸೋರಿಕೆಯಾಗಿದ್ದಾಗಿ, ಸಂಸ್ಥೆ ಆಲನ್‌ ಗಲ್‌ ತಿಳಿಸಿದ್ದಾರೆ.

ಫೇಸ್‌ಬುಕ್‌ ಪ್ರೊಫೈಲ್‌ ಐಡಿ, ಪರಿಚಯ, ಪೂರ್ಣ ಹೆಸರು, ಜನ್ಮದಿನ, ಲೋಕೇಶನ್‌ ಮತ್ತು ಈ ಮೇಲ್‌ ವಿವರಗಳು ಸೋರಿಕೆಯಾಗಿವೆ. ಭಾರತದ 60 ಲಕ್ಷ ಬಳಕೆದಾರರ ಫೋನ್‌ ನಂಬರ್ ಸೇರಿ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದ್ದು, ಡಾರ್ಕ್‌ನೆಟ್‌ನಲ್ಲಿ ಅಲ್ಪಮೊತ್ತಕ್ಕೆ ಮಾರಾಟವಾಗುತ್ತಿರುವಾಗ ಈ ಸಂಗತಿ ತಿಳಿದು ಬಂದಿದೆ.

ಆದರೆ ಆಕ್ಸಿಯಸ್‌ ಸಂಸ್ಥೆ ನೀಡಿರುವ ಸ್ಪಷ್ಟನೆಯಲ್ಲಿ ಫೇಸ್‌ಬುಕ್‌, ಇದು 2019ರಲ್ಲಿ ಸೋರಿಕೆಯಾದ ಡಾಟಾ ಆಗಿದ್ದು, ಮತ್ತೆ ಮಾರಾಟವಾಗುತ್ತಿದೆ. ಆದರೆ ಹೊಸ ಸೋರಿಕೆಯಲ್ಲ ಎಂದು ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: